ಮಡಿಕೇರಿ ಮಾ.9 : ಅರಣ್ಯದಿಂದ ಹಾದಿ ತಪ್ಪಿ ಬಂದು ಜನ ವಸತಿ ಪ್ರದೇಶದಲ್ಲಿ ಓಡಾಡುತ್ತಿದ್ದ ಸಾರಂಗವನ್ನು ಶ್ವಾನಗಳ ಗುಂಪು ದಾಳಿ ಮಾಡಿ ಕೊಂದು ಹಾಕಿದ ಘಟನೆ ಚಿತ್ರದುರ್ಗ ಸಮೀಪದ ಚಳ್ಳಕೆರೆ ತಾಲ್ಲೂಕಿನ ಬಕ್ಕಂಬುಡಿ ಗ್ರಾಮದಲ್ಲಿ ನಡೆದಿದೆ.
ಶ್ವಾನಗಳು ದಾಳಿ ಮಾಡಿದಾಗ ಸ್ಥಳೀಯರು ಸಾರಂಗವನ್ನು ರಕ್ಷಿಸಿದ್ದಾರೆ. ತೀವ್ರವಾಗಿ ಗಾಯಗೊಂಡ ವನ್ಯಜೀವಿಗೆ ಅರಣ್ಯ ಇಲಾಖೆಯ ಪಶು ವೈದ್ಯಾಧಿಕಾರಿಗಳು ಚಿಕಿತ್ಸೆ ನೀಡಿದರು. ಆದರೆ ಚಿಕಿತ್ಸೆ ಫಲಿಸದೆ ಸಾರಂಗ ಮೃತಪಟ್ಟಿತು.










