ವಿರಾಜಪೇಟೆ ಮಾ.9 : ವಿರಾಜಪೇಟೆ ಬ್ರಹ್ಮಗಿರಿ ಸಹೋದಯ ಸಂಸ್ಥೆ ವತಿಯಿಂದ ಅರಮೇರಿ ಎಸ್‍ಎಂಎಸ್ ವಿದ್ಯಾಪೀಠದಲ್ಲಿ ವಸುಂಧರ ವಿಜ್ಞಾನ ದಿನ ಆಚರಿಸಲಾಯಿತು.
ಜಿಲ್ಲೆಯ ಸಿಬಿಎಸ್‍ಇ ಶಾಲೆಗಳ 6ನೇ ಹಾಗೂ 8ನೇ ತರಗತಿ ವಿದ್ಯಾರ್ಥಿಗಳಿಗೆ ಜಾಗತಿಕ ಯೋಗ ಕ್ಷೇಮಕ್ಕಾಗಿ ಜಾಗತಿಕ ವಿಜ್ಞಾನದ ಬಗ್ಗೆ ಪ್ರದರ್ಶನ ಸಂಗೀತ, ನಾಟಕ, ನೃತ್ಯದ ಮೂಲಕ ಸಂದೇಶ ಸಾರಿದರು.
ನೀರು, ಮಣ್ಣು, ಶಾಕ, ಗಾಳಿ, ಸಸ್ಯವರ್ಗ, ಪ್ರಾಣಿ ವರ್ಗ ವಿಷಯದಲ್ಲಿ ಭೂಮಂಡಲ ರಕ್ಷಣೆಗೆ ಯುವ ಪೀಳಿಗೆಯ ಪಾತ್ರದ ಕುರಿತು ಜಾಗೃತಿ ಮೂಡಿಸಿದರು.
ಎಸ್‍ಎಂಎಸ್ ವಿದ್ಯಾಸಂಸ್ಥೆಯ ಪಾಂಚಜನ್ಯ ಬ್ಯಾಂಡ್ ಪಡೆ, ವಿರೋಚನಾ ನೃತ್ಯ ತಂಡದಿಂದ ಪ್ರದರ್ಶನ ನೀಡಲಾಯಿತು.
ಸೈನಿಕ ಶಾಲೆಯ ಪ್ರಾಂಶುಪಾಲ ಕರ್ನಲ್ ಜಿ.ಕಣ್ಣನ್ ಮಾತನಾಡಿ, ವೈಜ್ಞಾನಿಕ ಮನೋಭಾವ ಅವಶ್ಯ ಎಂದರು.
ಅರಮೇರಿ ಕಳಂಚೇರಿ ಮಠದ ಪೀಠಾಧಿಪತಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಆಧ್ಯಾತ್ಮ ಮತ್ತು ವಿಜ್ಞಾನದ ಸಂಬಂಧವನ್ನು ತಿಳಿಸಿಕೊಟ್ಟರು.
ಬ್ರಹ್ಮಗಿರಿ ಸಹೋದಯ ಸಂಸ್ಥೆ ಅಧ್ಯಕ್ಷೆ ಕೆ.ಎಸ್.ಸುಮಿತ್ರಾ, ನ್ಯಾಷನಲ್ ಅಕಾಡೆಮಿ ಪ್ರಾಂಶುಪಾಲ ಜೆ.ಎನ್.ಪುಷ್ಪ, ಅಂಕುರ್ ಪಬ್ಲಿಕ್ ಶಾಲೆ ವ್ಯವಸ್ಥಾಪಕ ರತ್ನ ಚರ್ಮಣ, ಎಸ್‍ಎಂಎಸ್ ಪ್ರಾಂಶುಪಾಲ ಕುಸುಮ್ ಟಿಟೋ, ಎಎಲ್‍ಜಿ ಪ್ರಾಂಶುಪಾಲ ಜಾಯ್ಸಿ ವಿನಯ, ಶಿಕ್ಷಕಿ ಪಿ.ಎ.ಪ್ರತಿಮ ಹಾಜರಿದ್ದರು.
Breaking News
- *ದಕ್ಷಿಣ ಕೊಡಗಿನಲ್ಲಿ ಸಣ್ಣ ಕೈಗಾರಿಕಾ ಪ್ರದೇಶಾಭಿವೃದ್ಧಿ : 50 ಏಕರೆ ಭೂಮಿ ಮಂಜೂರಾತಿಗೆ ಆಪ್ ಮನವಿ*
- *ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜು : 8ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ*
- *ರಾಷ್ಟ್ರೀಯ ಜೂನಿಯರ್ ಹಾಕಿ ತಂಡಕ್ಕೆ ಕೊಡಗಿನ ವಿಶ್ವಜಿತ್ ಹಾಗೂ ಪೂಜಿತ್ ಆಯ್ಕೆ*
- *ರಾಷ್ಟ್ರೀಯ ಜೂನಿಯರ್ ಹಾಕಿ ತಂಡಕ್ಕೆ ದೃಶ್ಯ ಅಚ್ಚಪ್ಪ ಆಯ್ಕೆ*
- *ಹೆಬ್ಬಾಲೆ : ಜ.23 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*
- *ಶ್ರೀ ರಾಮ ಜನ್ಮಭೂಮಿ ಸೇವಾ ಸಮಿತಿಯಿಂದ ಮಡಿಕೇರಿಯಲ್ಲಿ ಅನ್ನದಾನ*
- *ಜ.26 ರಂದು ಲೋಕಾಪ೯ಣೆಯಾಗಲಿದೆ ಮತ್ತೆ ವಸಂತ*
- *ಹೆಗ್ಗಳ ಗ್ರಾಮದ ಸರ್ಕಾರಿ ಶಾಲೆಗೆ ಕಂಪ್ಯೂಟರ್ ಕೊಡುಗೆ*
- *ಎನ್.ಯು.ನಾಚಪ್ಪ ವಿರುದ್ಧ ಪ್ರಕರಣ : ಮಡಿಕೇರಿ ಕೊಡವ ಸಮಾಜ ಖಂಡನೆ*
- *ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿಗೆ ಪಿ.ಹೆಚ್.ಡಿ ಪದವಿ*