ಮಡಿಕೇರಿ ಮಾ.9 : ಕುಂಜಿಲದಲ್ಲಿ ಅಂತಿಮ ವಿಶ್ರಾಂತಿ ಪಡೆಯುತ್ತಿರುವ ಪಯ್‍ನರಿ ವಲಿಯುಲ್ಲಾಹ್ ಅವರ ವಾರ್ಷಿಕ ಉರೂಸ್ ಸಮಾರಂಭವು ಮಾ.10 ರಿಂದ 16ರ ವರೆಗೆ ನಡೆಯಲಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಯ್‍ನರಿ ಸುನ್ನೀ ಮುಸ್ಲಿಂ ಜಮಾಅತ್ ಮಾಜಿ ಕಾರ್ಯದರ್ಶಿ ಪಿ.ಎಂ.ಅಜೀಜ್ ಮಾಸ್ಟರ್, ವಿವಿಧ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.
ಮಾ.10 ರಂದು ಮಧ್ಯಾಹ್ನ 2 ಗಂಟೆಗೆ ಪಯ್‍ನರಿ ಸುನ್ನಿ ಮುಸ್ಲಿ ಜಮಾಅತ್ ನ ಅಧ್ಯಕ್ಷ ಶೌಕತ್ ಆಲಿ ಉರೂಸ್ ಧ್ವಜಾರೋಹಣ ನೆರವೇರಿಸಲಿದ್ದು, ಪಯ್‍ನರಿ ಜಮಾಅತ್ ಖತೀಬರಾದ ನಿಝಾರ್ ಅಹ್ಸನಿ ಮಖಾಂ ಅಲಂಕಾರ ನೇತೃತ್ವ ವಹಿಸಲಿದ್ದಾರೆ.
ರಾತ್ರಿ 8.30 ಗಂಟೆಗೆ ಅಂತರಾಷ್ಟ್ರೀಯ ವಾಗ್ಮಿ ಡಾ.ಫಾರೂಖ್ ನಈಮಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.
ಮಾ.11 ರಂದು ರಾತ್ರಿ 8.30 ಗಂಟೆಗೆ ಆಶಿಖ್ ಧಾರಿಮಿ ಉಪನ್ಯಾಸ ನೀಡಲಿದ್ದು, ಮಾ.12 ರಂದು ರಾತ್ರಿ 8 ಗಂಟೆಗೆ ಸ್ವಾದಿಖ್ ಫಾಳಿಲಿ ಮತ್ತು ಸಂಗಡಿಗರಿಂದ ಬೃಹತ್ ಬುರ್ದಾ ಮಸ್ಲಿಸ್ ನಡೆಯಲಿದೆ.
ಮಾ.13 ರಂದು ಮಧ್ಯಾಹ್ನ 1.15 ಗಂಟೆಗೆ ಸಯ್ಯಿದ್ ಶಿಹಾಬುದ್ಧೀನ್ ಅಲ್ ಐದರೂಸಿ ನೇತೃತ್ವದಲ್ಲಿ ಸಾರ್ವಜನಿಕ ಸೌಹಾರ್ದ ಸಮ್ಮೇಳನ ಜರುಗಲಿದ್ದು, ಅಧ್ಯಕ್ಷತೆಯನ್ನು ಪಯ್‍ನರಿ ಜಮಾಅತ್ ಅಧ್ಯಕ್ಷ ಶೌಕತ್ ಆಲಿ ವಹಿಸಲಿದ್ದಾರೆ.
ಎಸ್‍ವೈಎಸ್ ರಾಜ್ಯಾಧ್ಯಕ್ಷ ಡಾ.ಅಬ್ದುಲ್ ರಶೀದ್ ಝೈನಿ ಕಾಮಿಲ್ ಕನ್ನಡ ಉಪನ್ಯಾಸ ನೀಡಲಿದ್ದಾರೆ.
ಸಂಜೆ 4 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದ್ದು, ರಾತ್ರಿ 8 ಗಂಟೆಗೆ ನವಾಝ್ ಮನ್ನಾನಿ ಪನವೂರ್ ಉಪನ್ಯಾಸ ನೀಡಲಿಡಲಿದ್ದು, ಮಾ.14 ರಂದು ರಾತ್ರಿ 8 ಗಂಟೆಗೆ ಹಾಫಿಳ್ ಇ.ಪಿ.ಅಬುಬಕರ್ ಅಲ್ ಖಾಸಿಮಿ ಉಪನ್ಯಾಸ ನೀಡಲಿದ್ದಾರೆ.
ಮಾ.15 ರಂದು ರಾತ್ರಿ 8 ಗಂಟೆಗೆ ಮುಸ್ತಫ ಸಖಾಫಿ ಉಪನ್ಯಾಸ ನೀಡಲಿದ್ದು, ಮಾ.16 ರಂದು ರಾತ್ರಿ 8 ಗಂಟೆಗೆ ಬೃಹತ್ ಸ್ವಲಾತ್ ಮಜ್ಲಿಸ್ ವಾರ್ಷಿಕ ಸಮಾರಂಭ ಜರುಗಲಿದೆ.
ಕಾರ್ಯಕ್ರಮವನ್ನು ಸಮಸ್ತ ಕೇಂದ್ರ ಮುಶಾವರದ ಶೈಖುನಾ ಅಬ್ದುಲ್ಲ ಫೈಝಿ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಕೊಡಗು ನಾಇಬ್ ಖಾಝಿ ಶೈಖುನಾ ಶಾದುಲಿ ವಹಿಸಲಿದ್ದಾರೆ. ಸ್ಥಳೀಯ ಖತೀಬರಾದ ನಿಝಾರ್ ಅಹ್ಸನಿ ಪ್ರಾಸ್ತವಿಕ ಭಾಷಣ ಮಾಡಲಿದ್ದು, ಸ್ವಲಾತ್ ನೇತೃತ್ವವನ್ನು ಶೈಖುನಾ ಅಬ್ದುಲ್ಲ ಉಸ್ತಾದ್ ವಹಿಸಲಿದ್ದಾರೆ. ವೇದಿಕೆಯಲ್ಲಿ ಜಿಲ್ಲೆಯ ಪ್ರಮುಖ ಜಮಾಅತ್ ಅಧ್ಯಕ್ಷರುಗಳು, ಖತೀಬರು ಹಾಗೂ ಇನ್ನಿತರ ಗಣ್ಯ ವ್ಯಕ್ತಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಮಾಅತ್ ಅಧ್ಯಕ್ಷ ಶೌಖತ್ ಆಲಿ ಮಕ್ಕಿ, ಸಮಿತಿ ಸದಸ್ಯರಾದ ಎ.ಇ.ಇರ್ಷಾದ್, ಕೀತಂಗೋಟ್ ಉಸ್ಮಾನ್ ಮೌಲವಿ, ಸಲಹಾ ಸಮಿತಿ ಸದಸ್ಯ ಪಯ್ಯಡಿ ಹಂಝ ಉಪಸ್ಥಿತರಿದ್ದರು.
Breaking News
- *ಮಾವಿನಹಳ್ಳ ಹಾಡಿ ಮತ್ತು ಕಟ್ಟೆ ಹಾಡಿಯ ಅರಣ್ಯ ಹಕ್ಕು ಗ್ರಾಮಸಭೆ*
- *ಬಾಳೆಲೆ : ಮಣ್ಣು ಪರೀಕ್ಷೆ ಮತ್ತು ಸಸ್ಯ ಪೋಷಕಾಂಶಗಳ ನಿರ್ವಹಣೆ ಕುರಿತು ಮಾಹಿತಿ ಕಾರ್ಯಕ್ರಮ*
- *ಜ.26 ರಂದು ಗಣರಾಜ್ಯೋತ್ಸವ ದಿನಾಚರಣೆ*
- *ದಕ್ಷಿಣ ಕೊಡಗಿನಲ್ಲಿ ಸಣ್ಣ ಕೈಗಾರಿಕಾ ಪ್ರದೇಶಾಭಿವೃದ್ಧಿ : 50 ಏಕರೆ ಭೂಮಿ ಮಂಜೂರಾತಿಗೆ ಆಪ್ ಮನವಿ*
- *ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜು : 8ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ*
- *ರಾಷ್ಟ್ರೀಯ ಜೂನಿಯರ್ ಹಾಕಿ ತಂಡಕ್ಕೆ ಕೊಡಗಿನ ವಿಶ್ವಜಿತ್ ಹಾಗೂ ಪೂಜಿತ್ ಆಯ್ಕೆ*
- *ರಾಷ್ಟ್ರೀಯ ಜೂನಿಯರ್ ಹಾಕಿ ತಂಡಕ್ಕೆ ದೃಶ್ಯ ಅಚ್ಚಪ್ಪ ಆಯ್ಕೆ*
- *ಹೆಬ್ಬಾಲೆ : ಜ.23 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*
- *ಶ್ರೀ ರಾಮ ಜನ್ಮಭೂಮಿ ಸೇವಾ ಸಮಿತಿಯಿಂದ ಮಡಿಕೇರಿಯಲ್ಲಿ ಅನ್ನದಾನ*
- *ಜ.26 ರಂದು ಲೋಕಾಪ೯ಣೆಯಾಗಲಿದೆ ಮತ್ತೆ ವಸಂತ*