ಸುಂಟಿಕೊಪ್ಪ,ಮಾ.9: ಪುರುಷರಂತೆ ಮಹಿಳೆಯರಿಗೂ ಸಮಾನ ಹಕ್ಕುಗಳನ್ನು ನೀಡಿದರೆ ಸಮಾಜದಲ್ಲಿ ಗೌರವಯುತ ಸ್ಥಾನ ಮಾನ ಪಡೆಯಲು ಸಾಧ್ಯವಾಗಲಿದೆ ಎಂದು ಜೆಸಿಐ ಸಂಸ್ಥೆಯ ವಲಯ ಅಧ್ಯಕ್ಷೆ ತುಮಕೂರಿನ ಯಶಸ್ವಿನಿ ಅಭಿಪ್ರಾಯಪಟ್ಟರು.
ಸುಂಟಿಕೊಪ್ಪ ಜೆಸಿಐ ಸಂಸ್ಥೆಯ ವತಿಯಿಂದ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ರತಿಯೊಬ್ಬ ಮಹಿಳೆಯರು ಸಮಾಜದಲ್ಲಿ ಎಲ್ಲ ರೀತಿಯ ಸಮಾನತೆ, ಪ್ರೀತಿ, ಗೌರವವನ್ನು ಮಾತ್ರ ಬಯಸುತ್ತಾರೆ. ಮಹಿಳೆಯರ ಸಾಧನೆಗೆ ಪುರುಷರು ಅಡ್ಡಿಪಡಿಸದೆ ಸಹಕಾರ ಮತ್ತು ಪ್ರೋತ್ಸಾಹ ನೀಡಿದರೆ ಮಹಿಳೆಯರ ಗೌರವ ಮತ್ತು ಸಾಧನೆಗಳು ಉತ್ತುಂಗ ಮುಟ್ಟಲಿದೆ ಎಂದರು.
ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಯಶಸ್ವಿನಿ( ಸಮಾಜ ಸೇವೆ), ಆರತಿ ಸೋಮಯ್ಯ( ಸ್ವಸ್ಥ ಸಂಸ್ಥೆಯ ವಿಶೇಷ ಚೇತನ ಶಾಲೆಯ ನಿರ್ದೇಶಕಿ), ಶ್ರೀದೇವಿ( ಚುಟುಕು ಕವಿ), ರೂಪಾ ರಮೇಶ್( ಅನಾಥರಿಗೆ ಆಶ್ರಯ) ಅವರುಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.
ಸುಂಟಿಕೊಪ್ಪ ಜೆಸಿಐ ಸಂಸ್ಥೆಯ ನಿರ್ಗಮಿತ ಅಧ್ಯಕ್ಷ ಸತೀಶ್ ಪೂಜಾರಿ, ನಿಯೋಜಿತ ಅಧ್ಯಕ್ಷ ಜಿ.ಟಿ.ಪ್ರೇಮಕುಮಾರ್, ವಲಯ ಉಪಾಧ್ಯಕ್ಷ ನೆಲ್ಸನ್,ಪೂರ್ವ ವಲಯ ಅಧಿಕಾರಿಗಳಾದ ದೇವಿಪ್ರಸಾದ್ ಕಾಯಾರ್ ಮಾರ್, ಡೆನಿಸ್ ಡಿಸೋಜ, ಹರೀಶ್, ವೆಂಕಪ್ಪ ಕೋಟ್ತಾನ್, ಅರುಣ್ ಕುಮಾರ್, ಮನುಅಚ್ಚಮಯ್ಯ, ಸದಾಶಿವ ರೈ, ಪ್ರೇಮಲತ ರೈ, ಫೆಲ್ಸಿ, ರಮೇಶ್, ನಿರಂಜನ್, ಪ್ರೀತಂ ಪ್ರಭಕರ್, ಮುರುಗೇಶ್ ಮಾಯಾ ಇತರರು ಇದ್ದರು.
Breaking News
- *ದಕ್ಷಿಣ ಕೊಡಗಿನಲ್ಲಿ ಸಣ್ಣ ಕೈಗಾರಿಕಾ ಪ್ರದೇಶಾಭಿವೃದ್ಧಿ : 50 ಏಕರೆ ಭೂಮಿ ಮಂಜೂರಾತಿಗೆ ಆಪ್ ಮನವಿ*
- *ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜು : 8ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ*
- *ರಾಷ್ಟ್ರೀಯ ಜೂನಿಯರ್ ಹಾಕಿ ತಂಡಕ್ಕೆ ಕೊಡಗಿನ ವಿಶ್ವಜಿತ್ ಹಾಗೂ ಪೂಜಿತ್ ಆಯ್ಕೆ*
- *ರಾಷ್ಟ್ರೀಯ ಜೂನಿಯರ್ ಹಾಕಿ ತಂಡಕ್ಕೆ ದೃಶ್ಯ ಅಚ್ಚಪ್ಪ ಆಯ್ಕೆ*
- *ಹೆಬ್ಬಾಲೆ : ಜ.23 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*
- *ಶ್ರೀ ರಾಮ ಜನ್ಮಭೂಮಿ ಸೇವಾ ಸಮಿತಿಯಿಂದ ಮಡಿಕೇರಿಯಲ್ಲಿ ಅನ್ನದಾನ*
- *ಜ.26 ರಂದು ಲೋಕಾಪ೯ಣೆಯಾಗಲಿದೆ ಮತ್ತೆ ವಸಂತ*
- *ಹೆಗ್ಗಳ ಗ್ರಾಮದ ಸರ್ಕಾರಿ ಶಾಲೆಗೆ ಕಂಪ್ಯೂಟರ್ ಕೊಡುಗೆ*
- *ಎನ್.ಯು.ನಾಚಪ್ಪ ವಿರುದ್ಧ ಪ್ರಕರಣ : ಮಡಿಕೇರಿ ಕೊಡವ ಸಮಾಜ ಖಂಡನೆ*
- *ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿಗೆ ಪಿ.ಹೆಚ್.ಡಿ ಪದವಿ*