ಮಡಿಕೇರಿ ಮಾ.9 : ಪ್ರಭಾರ ವಲಯ ಅರಣ್ಯಾಧಿಕಾರಿ ಬಳಿಯಿಂದ ರೂ.50 ಸಾವಿರ ಲಂಚ ಸ್ವೀಕರಿಸಿದ ಆರೋಪದಡಿ ಲೋಕಾಯುಕ್ತರು ಡಿ.ಎಫ್.ಓ ಕು.ಪೂರ್ಣಿಮ ಎಂಬುವವರನ್ನು ಮಡಿಕೇರಿ ಅರಣ್ಯ ಭವನದ ಬಳಿ ವಶಕ್ಕೆ ಪಡೆದಿದ್ದಾರೆ.
ದೂರುದಾರ ಸಾಮಾಜಿಕ ಅರಣ್ಯ ವಲಯದ ಪ್ರಭಾರ ವಲಯ ಅರಣ್ಯಾಧಿಕಾರಿ ಮಯೂರ ಅವರು ಆರೋಪಿ ಪೂರ್ಣಿಮ ಅವರ ಸೂಚನೆಯಂತೆ ಅರಣ್ಯ ಭವನದ ಬಳಿ ಹಣದ ಕವರ್ ನ್ನು ಜೀಪ್ ನಲ್ಲಿ ಇಡುತ್ತಿದ್ದ ಸಂದರ್ಭ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದರು.
::: ದೂರಿಗೆ ಕಾರಣ :::
ಮಯೂರ ಅವರ ಕರ್ತವ್ಯದ ವ್ಯಾಪ್ತಿಗೆ ಒಳಪಡುವ ಹೊದ್ದೂರು ವೋಟೆಕಾಡು ನರ್ಸರಿಯಲ್ಲಿ ಕರ್ತವ್ಯ ನಿರ್ವಹಿಸಲು ಓರ್ವ ವಾಚರ್ ನ್ನು ನೇಮಿಸಿಕೊಂಡು ಮಾಸಿಕ ರೂ.15 ಸಾವಿರ ವೇತನ ನೀಡಲಾಗುತ್ತಿತ್ತು. ಆದರೆ ಮತ್ತೊಬ್ಬ ವಾಚರ್ ನ್ನು ನೇಮಿಸಿಕೊಂಡAತೆ ಸುಳ್ಳು ದಾಖಲೆಯನ್ನು ಸೃಷ್ಟಿಸಿ ಆ ಮಾಸಿಕ ಸಂಬಳವನ್ನು ನನಗೆ ನೀಡುವಂತೆ ಪೂರ್ಣಿಮ ಅವರು ಒತ್ತಡ ಹೇರಿದ್ದರು. ಅಲ್ಲದೆ ನನ್ನ ಕರ್ತವ್ಯದ ವ್ಯಾಪ್ತಿಯಲ್ಲಿ ನಡೆದ ಎರಡು ಕಾಮಗಾರಿಗಳ ಒಟ್ಟು ಮೊತ್ತ ರೂ.1.60 ಲಕ್ಷ ರೂ.ಗಳಲ್ಲಿ ಶೇ.60 ರಷ್ಟನ್ನು ನನಗೆ ನೀಡುವಂತೆ ಪೂರ್ಣಿಮ ಒತ್ತಾಯ ಮಾಡಿದ್ದರು.
ಲಂಚ ನೀಡಲು ಒಪ್ಪದೆ ಇದ್ದ ಕಾರಣಕ್ಕಾಗಿ ಸಾರ್ವಜನಿಕವಾಗಿ ನನ್ನನ್ನು ನಿಂದಿಸುತ್ತಿದ್ದರು. ನನಗೆ ಲಂಚ ನೀಡಲು ಇಷ್ಟವಿಲ್ಲದ ಕಾರಣ ದೂರು ನೀಡುತ್ತಿರುವುದಾಗಿ ಮಯೂರ ಲೋಕಾಯುಕ್ತಕ್ಕೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೆ ಶೇ.60 ಹಣಕ್ಕೆ ಬೇಡಿಕೆ ಇಟ್ಟ ಮೊಬೈಲ್ ಧ್ವನಿ ಮುದ್ರಣವನ್ನು ಕೂಡ ಮಾಡಿ ಸಾಕ್ಷೀಕರಿಸಿದ್ದರು.
ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ರೂ.50 ಸಾವಿರವಿದ್ದ ಕವರ್ ನ್ನು ಜೀಪ್ ನಲ್ಲಿಡುತ್ತಿದ್ದಾಗ ಪೂರ್ಣಿಮಾ ಅವರನ್ನು ವಶಕ್ಕೆ ಪಡೆದು ತನಿಖೆಗೆ ಒಳಪಡಿಸಿದರು.
ಲೋಕಾಯುಕ್ತ ಅಪರ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್‌ಕುಮಾರ್ ಠಾಕೂರ್, ಪೊಲೀಸ್ ಮಹಾನಿರೀಕ್ಷಕ ಡಾ|| ಎ.ಸುಬ್ರಮಣೇಶ್ವರ ರಾವ್, ಮೈಸೂರು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸುರೇಶ್‌ಬಾಬು, ಮಡಿಕೇರಿ ಲೋಕಾಯುಕ್ತ ಡಿವೈಎಸ್‌ಪಿ ಎಂ.ಎಸ್.ಪವನ್ ಕುಮಾರ್, ಮೈಸೂರು ಲೋಕಾಯುಕ್ತ ಡಿವೈಎಸ್‌ಪಿ ಕೃಷ್ಣಯ್ಯ ವಿ. ಅವರ ಮಾರ್ಗದರ್ಶನದಲ್ಲಿ ಕೊಡಗು ಜಿಲ್ಲೆಯ ಪೊಲೀಸ್ ನಿರೀಕ್ಷಕ ಲೋಕೇಶ, ಮೈಸೂರು ಜಿಲ್ಲೆಯ ಪೊಲೀಸ್ ನಿರೀಕ್ಷಕ ಜಯರತ್ನ ನೇತೃತ್ವದ ತಂಡ ಹಾಗೂ ಲೋಕಾಯುಕ್ತ ಠಾಣೆಯ ಕೊಡಗು ಜಿಲ್ಲೆಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು.
Breaking News
- *ದಕ್ಷಿಣ ಕೊಡಗಿನಲ್ಲಿ ಸಣ್ಣ ಕೈಗಾರಿಕಾ ಪ್ರದೇಶಾಭಿವೃದ್ಧಿ : 50 ಏಕರೆ ಭೂಮಿ ಮಂಜೂರಾತಿಗೆ ಆಪ್ ಮನವಿ*
- *ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜು : 8ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ*
- *ರಾಷ್ಟ್ರೀಯ ಜೂನಿಯರ್ ಹಾಕಿ ತಂಡಕ್ಕೆ ಕೊಡಗಿನ ವಿಶ್ವಜಿತ್ ಹಾಗೂ ಪೂಜಿತ್ ಆಯ್ಕೆ*
- *ರಾಷ್ಟ್ರೀಯ ಜೂನಿಯರ್ ಹಾಕಿ ತಂಡಕ್ಕೆ ದೃಶ್ಯ ಅಚ್ಚಪ್ಪ ಆಯ್ಕೆ*
- *ಹೆಬ್ಬಾಲೆ : ಜ.23 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*
- *ಶ್ರೀ ರಾಮ ಜನ್ಮಭೂಮಿ ಸೇವಾ ಸಮಿತಿಯಿಂದ ಮಡಿಕೇರಿಯಲ್ಲಿ ಅನ್ನದಾನ*
- *ಜ.26 ರಂದು ಲೋಕಾಪ೯ಣೆಯಾಗಲಿದೆ ಮತ್ತೆ ವಸಂತ*
- *ಹೆಗ್ಗಳ ಗ್ರಾಮದ ಸರ್ಕಾರಿ ಶಾಲೆಗೆ ಕಂಪ್ಯೂಟರ್ ಕೊಡುಗೆ*
- *ಎನ್.ಯು.ನಾಚಪ್ಪ ವಿರುದ್ಧ ಪ್ರಕರಣ : ಮಡಿಕೇರಿ ಕೊಡವ ಸಮಾಜ ಖಂಡನೆ*
- *ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿಗೆ ಪಿ.ಹೆಚ್.ಡಿ ಪದವಿ*