ಮಡಿಕೇರಿ ಮಾ.10 : ಹಿಂದುತ್ವದ ಪರ ಕಾರ್ಯನಿರ್ವಹಿಸುವುದು ಹಾಗೂ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಸಂಕಷ್ಟದಲ್ಲಿದ್ದಾಗ ಸ್ಪಂಧಿಸುವ ಹಿಂದೂ ಮುಖಂಡರಿಗೆ ಕೊಡಗು ಯುವ ಸೇನೆಯು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬೆಂಬಲ ಸೂಚಿಸಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ಯುವಸೇನೆಯ ಜಿಲ್ಲಾ ಮುಖಂಡ ಕುಲದೀಪ್ ಪೂಣಚ್ಚ ಹಾಗೂ ಜಿಲ್ಲಾ ಸಂಚಾಲಕ ಮಾಚಟ್ಟಿರ ಸಚಿನ್ ಮಂದಣ್ಣ, ಯುವ ಜನತೆಯ ಕನಸು ನನಸಾಗಿಸುವ ನಿಟ್ಟಿನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಅದಕ್ಕಾಗಿ ಒಳ್ಳೆಯ ಹಿಂದೂಪರ ಮುಖಂಡರ ಅವಶ್ಯಕತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಯುವ ಜನಾಂಗ ರಾಜಕೀಯದಲ್ಲಿದ್ದರೆ ಅಭಿವೃದ್ಧಿಯ ರೀತಿ ರೂಪುರೇಷೆಗಳು ವಿಭಿನ್ನ ರೀತಿಯಲ್ಲಿ ಇರುತ್ತದೆ ಎಂದು ತಿಳಿಸಿದರು.








