ನಾಪೋಕ್ಲು ಮಾ.10 : ಹೆಲ್ತ್ ಗ್ಲೋರಿ ಜನ ಸೇವಾ ಕ್ಲಿನಿಕ್ ಆಶ್ರಯದಲ್ಲಿ ಪರಂ ಜ್ಯೋತಿ ಅನ್ನಪೂರ್ಣೇಶ್ವರಿ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಉಚಿತ ಬಿಪಿ ಮತ್ತು ಶುಗರ್ ತಪಾಸಣಾ ಶಿಬಿರ ನಡೆಯಿತು.
ಬಿಜೆಪಿ ಪ್ರಮುಖರಾದ ಕೋಡಿನ ಪ್ರಸನ್ನ ನೂತನ ಕ್ಲಿನಿಕ್ ಉದ್ಘಾಟಿಸಿ ಮಾತನಾಡಿ, ಸಾರ್ವಜನಿಕರರು ಉಚಿತ ತಪಾಸಣಾ ಶಿಬಿರವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಡಾ. ಕೃಷಿ ಬೋಪಣ್ಣ ದೀಪ ಬೆಳಗಿಸಿ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ಕ್ಲಿನಿಕ್ ಪಾಲುದಾರ ಟಿ.ಬಿ.ಸುಜಿ ಮಾತನಾಡಿ ಪ್ರತಿ ದಿನ ಇ.ಸಿ.ಜಿ. ಹಾಗೂ ಬಿ.ಪಿ, ಶುಗರ್ ತಪಾಸಣೆಗೆ ರೂ.200 ಪ್ಯಾಕೇಜ್ ನಿಗದಿಪಡಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಮಾಹಿತಿ ನೀಡಿದರು.
ಕೆಎಂಸಿ ಆಸ್ಪತ್ರೆಯ ಮುಖ್ಯಸ್ಥ ಡಾ.ಪದ್ಮನಾಭ ಕಾಮತ್ ಉಚಿತ ವೈದ್ಯಕೀಯ ಸಲಹೆಯನ್ನು ಆನ್ ಲೈನ್ ಮೂಲಕ ರೋಗಿಗಳಿಗೆ ನೀಡಲಿದ್ದಾರೆ.
ಸನಿಲ್ ಕುಮಾರ್, ಸೀಮಾ, ರವಿ ಓಂಕಾರ್ ಪಾಲ್ಗೊಂಡಿದ್ದರು. ಸಿಬ್ಬಂದಿಗಳಾದ ಎಂ.ಯು ಮುದ್ದಪ್ಪ, ಅನುಷಾ, ಭಾರತೀಶ್ ಹಾಜರಿದ್ದರು.
ವರದಿ : ದುಗ್ಗಳ ಸದಾನಂದ.


