ಮಡಿಕೇರಿ ಮಾ.11 : ಯಾರದೋ ಮಗು ನಮ್ಮದು ಎಂದು ಪ್ರತಿಪಾದಿಸುವುದಕ್ಕೆ ಬದಲಾಗಿ, ಸಾಧನೆಯ ನಿಮ್ಮ ಕೂಸನ್ನು ಹುಡುಕಿಕೊಳ್ಳಿ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಅವರು ಪ್ರತಿ ಪಕ್ಷದ ಪ್ರಮುಖರನ್ನು ಕುಟುಕಿದ್ದಾರೆ.
ಮೈಸೂರು -ಬೆಂಗಳೂರು ದಶಪಥ ರಸ್ತೆಯ ಸಾಧನೆಯನ್ನು ಕಾಂಗ್ರೆಸ್‌ನ ಸಿದ್ದರಾಮಯ್ಯ ಸೇರಿದಂತೆ ಇತರರು ತಮ್ಮದೆಂದು ಹೇಳಿಕೊಳ್ಳುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಮಡಿಕೇರಿಯಲ್ಲಿ ಅವರು ಪ್ರತಿಕ್ರಿಯಿಸಿದ್ದು ಹೀಗೆ.
ದಶಪಥ ಯೋಜನೆಗೆ ಕಾಂಗ್ರೆಸ್ ಚಿಕ್ಕಾಸನ್ನು ಒದಗಿಸಿಲ್ಲ. ಪ್ರಸ್ತುತ ಕೇಂದ್ರದ ಬಿಜೆಪಿ ಸರ್ಕಾರ ಈ ಬೃಹತ್ ಯೋಜನೆಯನ್ನು ಕಾರ್ಯಗತಗೊಳಿಸಿದೆ. ಈ ಸಾಧನೆ ತಮ್ಮದೆನ್ನುವ ಕಾಂಗ್ರೆಸ್ ಮುಖಂಡರು ತಮ್ಮ ಸಾಧನೆಗಳ ಕೂಸನ್ನು ಹುಡುಕಿಕೊಳ್ಳಲಿ ಎಂದು ತಿರುಗೇಟು ನೀಡಿದರು.








