ನಾಪೋಕ್ಲು ಮಾ.13 : ಕಬಡಕೇರಿ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ದಿನಾಚರಣೆ ಪ್ರಯುಕ್ತ ಸಾಧಕರನ್ನು ಸನ್ಮಾನಿಸಲಾಯಿತು.
ಹೊದ್ದೂರು ಗ್ರಾ.ಪಂ ಅಧ್ಯಕ್ಷರಾದ ಕುಸುಮಾವತಿ ಕಾರ್ಯಕ್ರಮವನ್ನು ಉದ್ಘಾಟಿಸಿ ದಿನದ ಮಹತ್ವದ ಕುರಿತು ಮಾತನಾಡಿದರು.
ನಂತರ ಕಬಡಕೇರಿಯ ಹಿಂದೂ ರುಧ್ರ ಭೂಮಿ ಸೇವಾ ಸಮಿತಿ ವತಿಯಿಂದ ಸಮಾಜದಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆ ಮುಮ್ತಾಜ್, ಅಂಗನವಾಡಿ ಕಾರ್ಯಕರ್ತೆ ಎಂ.ಈ.ತಂಸೀನ ಬಾನು ಹಾಗೂ ಅಂಗನವಾಡಿ ಸಹಾಯಕಿ ಪ್ರೇಮ ಧರ್ಮಸ್ಥಳ ಸಂಘದ ವತಿಯಿಂದ ಸೇವಾಪ್ರತಿನಿಧಿಯಾಗಿ 11 ವರ್ಷಗಳ ಕಾಲ ಕಾರ್ಯ ಉತ್ತಮವಾಗಿ ನಿರ್ವಹಿಸುತ್ತಿರುವ ಮುಮ್ತಾಜ್, ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ಹಂಸಾವತಿ ಹಾಗೂ ಪೂಜಾಶ್ರೀ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಹೊದ್ದೂರು ಗ್ರಾ.ಪಂ ಉಪಾಧ್ಯಕ್ಷರಾದ ಸರಸು, ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಹಂಸಾವತಿ, ಹಿಂದೂ ರುದ್ರ ಭೂಮಿಯ ಅಧ್ಯಕ್ಷ ಸತೀಶ್, ಕಾರ್ಯದರ್ಶಿ ಕುಮಾರ ಪ್ರಸಾದ್, ಚೌರಿರಾ ಸಲೀನ ಜಗತ್, ಜ್ಞಾನ ಜ್ಯೋತಿ ವಿದ್ಯಾ ಸಂಸ್ಥೆಯ ಶಿಕ್ಷಕಿ ಸ್ಮಿತಾ, ಮಹಿಳಾ ಸಮಾಜದ ಉಪಾಧ್ಯಕ್ಷೆ ರುಕ್ಮುಣಿ, ಆಶಾ ಕಾರ್ಯಕರ್ತೆ ಎಂ.ಈ.ಮುಮ್ತಾಜ್, ಕಾವೇರಿ, ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷೆ ಜಲಜಾಕ್ಷಿ, ಬಾಲ ವಿಕಾಸ ಸಮಿತಿಯ ಸದಸ್ಯರಾದ ಸುರೇಶ್, ಡಾ.ಪೂಜಾಶ್ರೀ, ನಿವ್ಯ ಕುಮಾರಿ, ಧರ್ಮಸ್ಥಳ ಸಂಘದ ಸೇವಾ ಪ್ರತಿನಿಧಿ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಪ್ರಯುಕ್ತ ನಡೆದ ಮನರಂಜನಾ ಕಾರ್ಯಕ್ರಮದ ವಿಜೇತರಿಗೆ ಗಣ್ಯರು ಆಕರ್ಷಕ ಬಹುಮಾನ ವಿತರಿಸಿದರು.
ವರದಿ : ದುಗ್ಗಳ ಸದಾನಂದ.