ಸೋಮವಾರಪೇಟೆ ಮಾ.13 : ವಿಧಾನಸಭಾ ಚುನಾವಣೆ ಹಿನ್ನೆಲೆ ವಿವಿಧ ರಾಜಕೀಯ ಪಕ್ಷಗಳು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಪ್ರಚಾರದಲ್ಲಿ ಕೊಡಗು ಬಿಜೆಪಿ ಮುಂದಿದ್ದು, ಇಂದು ಸೋಮವಾರಪೇಟೆ ಪಟ್ಟಣದಲ್ಲಿ ಯುವ ಮೋರ್ಚಾದ ಯುವಶಕ್ತಿ ಸಂಗಮದ ಮೂಲಕ ಶಕ್ತಿ ಪ್ರದರ್ಶನವಾಗಿದೆ.
ಒಂದು ಸಾವಿರಕ್ಕೂ ಅಧಿಕ ಬೈಕ್ ಗಳಲ್ಲಿ ಜಾಥಾ ನಡೆಸಿದ ಬಿಜೆಪಿ ಕಾರ್ಯಕರ್ತರು ಪ್ರಧಾನಮಂತ್ರಿ ನರೇಂದ್ರಮೋದಿ ಹಾಗೂ ಜಾಥಾದ ನೇತೃತ್ವ ವಹಸಿದ್ದ ಶಾಸಕ ಅಪ್ಪಚ್ಚುರಂಜನ್ ಪರ ಘೋಷಣೆಗಳನ್ನು ಕೂಗಿದರು.









