ಮಡಿಕೇರಿ ಮಾ.13 : ಮಂಗಳೂರು ವಿಶ್ವವಿದ್ಯಾನಿಲಯವು ನಡೆಸಿದ ಅಂತಿಮ ವರ್ಷದ ಕನ್ನಡ ಎಂ.ಎ. ಪದವಿ ಪರೀಕ್ಷೆಯಲ್ಲಿ ಸುಂಟಿಕೊಪ್ಪ ಸಮೀಪದ ಕಲ್ಲೂರು ಗ್ರಾಮದ ಹೆಚ್. ಪಿ. ವಂದನಾ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಪ್ರಥಮ ರ‍್ಯಾಂಕ್ ಪಡೆದುಕೊಂಡಿದ್ದಾರೆ.
ಕಲ್ಲೂರು ಗ್ರಾಮದ ಪ್ರಕಾಶ್ ಮತ್ತು ಅನುರಾಧ ದಂಪತಿಯ ಪುತ್ರಿಯಾಗಿರುವ ವಂದನಾ ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದ ವಿದ್ಯಾರ್ಥಿನಿಯಾಗಿದ್ದಾರೆ.









