ಮಡಿಕೇರಿ ಮಾ.13 : ಬ್ಲ್ಯಾಕ್ ಪಾಂಥರ್ಸ್ ಮಹಿಳಾ ಕ್ಲಬ್ ವತಿಯಿಂದ ಪ್ರಥಮ ವರ್ಷದ ಜಿಲ್ಲಾ ಮಟ್ಟದ ಪುರುಷರ ವಾಲಿಬಾಲ್ ಮತ್ತು ಮಹಿಳೆಯರ ಥ್ರೋಬಾಲ್ ಪಂದ್ಯಾವಳಿ ಏ.9 ರಂದು ಮರಗೋಡು ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ.
ಸುದ್ದಿ ಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕ್ಲಬ್ ಅಧ್ಯಕ್ಷರಾದ ಮಿಲನ ಕಟ್ಟೆಮನೆ, ಅಂದು ಬೆಳಗ್ಗೆ 9 ಗಂಟೆಗೆ ಪಂದ್ಯಾವಳಿ ನಡೆಯಲಿದ್ದು, ವಾಲಿಬಾಲ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಆಸಕ್ತ ತಂಡಗಳು 2 ಸಾವಿರ ಪ್ರವೇಶ ಶುಲ್ಕದೊಂದಿಗೆ ಹಾಗೂ ಥ್ರೋಬಾಲ್‍ನಲ್ಲಿ ಪಾಲ್ಗೊಳ್ಳುವ ತಂಡಗಳು 1 ಸಾವಿರ ರೂ. ಪ್ರವೇಶ ಶುಲ್ಕದೊಂದಿಗೆ ತಂಡದ ಹೆಸರನ್ನು ಏ.6ರ ಸಂಜೆ 5 ಗಂಟೆಯ ಒಳಗಾಗಿ ನೋಂದಾಯಿಸಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಮೊ.9483426474, 9482022100, 9110689940ವನ್ನು ಸಂಪರ್ಕಿಸಬಹುದೆಂದು ತಿಳಿಸಿದರು.
ವಾಲಿಬಾಲ್‍ನಲ್ಲಿ ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ 25 ಸಾವಿರ ರೂ. ನಗದು ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನಕ್ಕೆ 15 ಸಾವಿರ ರೂ. ನಗದು ಮತ್ತು ಆಕರ್ಷಕ ಟ್ರೋಫಿ ನೀಡಲಾಗುತ್ತದೆ. ಇದರೊಂದಿಗೆ ಬೆಸ್ಟ್ ಅಟ್ಯಾಕರ್, ಬೆಸ್ಟ್ ಡಿಫೆಂಡರ್, ಬೆಸ್ಟ್ ಪ್ಲೆಯರ್ ವೈಯಕ್ತಿಕ ಬಹುಮಾನಗಳನ್ನು ನೀಡಲಾಗುತ್ತದೆಂದರು.
ಥ್ರೋಬಾಲ್‍ನಲ್ಲಿ ಪ್ರಥಮ ಬಹುಮಾನವಾಗಿ 15 ಸಾವಿರ ರೂ. ನಗದು ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನವಾಗಿ 10 ಸಾವಿರ ರೂ. ಮತ್ತು ಆಕರ್ಷಕ ಟ್ರೋಫಿ ಹಾಗೂ ಬೆಸ್ಟ್ ಅಟ್ಯಾಕರ್, ಬೆಸ್ಟ್ ಆಲ್ ರೌಂಡರ್ ವೈಯಕ್ತಿಕ ಬಹುಮಾನಗಳನ್ನು ನೀಡುವುದಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕ್ಲಬ್ ಉಪಾಧ್ಯಕ್ಷರಾದ ಮೋನಿಕಾ ಕಟ್ಟೆಮನೆ, ಕಾರ್ಯದರ್ಶಿ ನಮಿತಾ ಕಟ್ಟೆಮನೆ ಖಜಾಂಚಿ ರೀನಾ ಕಟ್ಟೆಮನೆ, ಕ್ರೀಡಾ ಅಧ್ಯಕ್ಷರಾದ ಬಿದ್ರುಪಣೆ ಜ್ಯೋತಿ ಉಪಸ್ಥಿತರಿದ್ದರು.