ಮಡಿಕೇರಿ ಮಾ.13 : ವಿಕೆ3 ಪಿಕ್ಚರ್ಸ್ ಬ್ಯಾನರ್ ನಲ್ಲಿ ಈರಮಂಡ ಹರಿಣಿ ವಿಜಯ್ ಮತ್ತು ಕೊಟ್ಟುಕತ್ತಿರ ಯಶೋಧ ಪ್ರಕಾಶ್ ಅವರ ನಿರ್ಮಾಣದಲ್ಲಿ ತಯಾರಾದ ಕೊಡವ ಕಾದಂಬರಿ ಆಧಾರಿತ, ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ನಿರ್ದೇಶನದ “ನಾಡ ಪೆದ ಆಶಾ” ಕೊಡವ ಚಲನಚಿತ್ರ ಇಲ್ಲಿಯವರೆಗೆ ಬರೋಬ್ಬರಿ 62 ಅಂತರ ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಚಿತ್ರತಂಡ ಚಿತ್ರದ ಯಶಸ್ಸಿನ ಕುರಿತು ಹರ್ಷ ವ್ಯಕ್ತಪಡಿಸಿತು.
ನಿರ್ಮಾಪಕಿ ಈರಮಂಡ ಹರಿಣಿ ವಿಜಯ್ ಮಾತನಾಡಿ ಕೊಡಗಿನ ಸಂಸ್ಕೃತಿ, ಆಚಾರ, ವಿಚಾರ, ಪರಿಸರದ ಮೇಲೆ ಬೆಳಕು ಚೆಲ್ಲಿರುವ ಮತ್ತು ಸ್ವಾವಲಂಬಿ ಮಹಿಳೆಯೊಬ್ಬಳು ಸಮಾಜಮುಖಿಯಾಗಿ ಸೇವೆ ಸಲ್ಲಿಸುವ ಕಥಾಹಂದರದ “ನಾಡ ಪೆದ ಆಶಾ” ಕೊಡವ ಭಾಷೆಯ ಚಲನಚಿತ್ರವಾದರೂ ಎಲ್ಲಾ ಜಾತಿ, ಮತ, ಬೇರೆ ಭಾಷೆಯವರು ಚಿತ್ರ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿ ಪ್ರೋತ್ಸಾಹ ನೀಡಿದ್ದಾರೆ ಎಂದರು.
ಸಿನಿಮಾ ವಿಮರ್ಶಕರ ಅನಿಸಿಕೆಗಳು ಈ ಚಿತ್ರವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಮತ್ತು ಇದುವರೆಗೆ ಪಾಲ್ಗೊಂಡ ವಿವಿಧ ಅಂತರರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಪ್ರಶಸ್ತಿಗಳನ್ನು ಪಡೆಯಲು ಸಾಧ್ಯವಾಗಿದೆ. ಇನ್ನೂ ಹಲವು ಪ್ರಶಸ್ತಿಗಳನ್ನು ಗೆಲ್ಲುವ ವಿಶ್ವಾಸ ನಮಗಿದೆ ಎಂದು ತಿಳಿಸಿದರು.
ನಾಡ ಪೆದ ಆಶಾ” ಕೊಡವ ಸಿನಿಮಾ 2021ನೇ ಸಾಲಿನ ಕೊಡವ ಸಾಹಿತ್ಯ ಅಕಾಡಮಿಯ ಪುಸ್ತಕ ಪ್ರಶಸ್ತಿ, 7ನೇ ದೆಹ್ರಡೂನ್, 2ನೇ ಚಂಡಿಗಡ್, 27ನೇ ಕೊಲ್ಕತ್ತಾ, ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ, ಕರ್ನಾಟಕದ 2ನೇ ಮೈಸೂರು ದಸರಾ ಚಲನಚಿತ್ರೋತ್ಸವ-2022, ದಲ್ಲೂ ಅಧಿಕೃತವಾಗಿ ಆಯ್ಕೆಗೊಂಡು ಪ್ರದರ್ಶನ ಕಂಡು ಪ್ರಶಸ್ತಿ ಪಡೆದಿತ್ತು. ಹುಬ್ಬಳ್ಳಿಯ ಸವಾಯಿ ಗಂಧರ್ವ ಕಲಾ ಮಂದಿರ ದಲ್ಲಿ ನಡೆದ 2ನೇ ಕರ್ನಾಟಕ ಅಂತರಾಷ್ಟ್ರೀಯ ಚಲನಚಿತ್ರೋತ್ಸವ -2022 ದಲ್ಲಿ “ಬೆಸ್ಟ್ ಡೈರೆಕ್ಟರ್ ಅವಾರ್ಡ”, ಬೆಂಗಳೂರಿನಲ್ಲಿ ನಡೆದ 3ನೇ ಅಂತರರಾಷ್ಟ್ರೀಯ ಪನೋರಮ ಚಿತ್ರೋತ್ಸವದಲ್ಲಿ “ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರ ಪ್ರಶಸ್ತಿ”ಯನ್ನು ಗಳಿಸಿದೆ.
ತಮಿಳುನಾಡುವಿನ ತಿರುನೆಲ್‍ವಲ್ಲಿ ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಬೆಸ್ಟ್ ಸ್ಟೋರಿ, ಬೆಸ್ಟ್ ಫಿಲಂ ಮೇಕರ್, ಜೂರಿ ಅವಾರ್ಡ್ ಹಾಗೂ ಬೆಸ್ಟ್ ಬಿಜಿಎಂ ಎಂಬ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
ಯುಕೆ ಯ ವಲ್ರ್ಡ್ ಫಿಲಂ ಫೆಸ್ಟಿವಲ್ ನಲ್ಲಿ ಆಯ್ಕೆಗೊಂಡು ಬೆಸ್ಟ್ ಮ್ಯೂಸಿಕ್, ಬೆಸ್ಟ್ ಸ್ಟೋರಿ, ಬೆಸ್ಟ್ ಫೀಚರ್ ಫಿಲಂ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಅಲ್ಲದೇ ಅಸ್ಸಾಂನ ಐ ಸಿಗ್ನೇಯಾ ಇಂಟನ್ರ್ಯಾಷನಲ್ ಫಿಲಂ ಫೆಸ್ಟಿವಲ್ ನಲ್ಲಿ ಬರೋಬ್ಬರಿ ಐದು ವಿಭಾಗದಲ್ಲಿ ಬೆಸ್ಟ್ ಡೈರೆಕ್ಟರ್, ಬೆಸ್ಟ್ ಎಡಿಟರ್, ಬೆಸ್ಟ್ ಫೀಚರ್ ಫಿಲಂ, ಬೆಸ್ಟ್ ಸ್ಕ್ರೀನ್ ಪ್ಲೇ, ಬೆಸ್ಟ್ ಪ್ರೊಡಕ್ಷನ್ ಡಿಸೈನ್ ಎಂಬ ಪ್ರಶಸ್ತಿ, ಇಂಡಿಯನ್ ಸ್ಕ್ರೀನ್ ಪ್ರಾಜೆಕ್ಟ್ ನಡೆಸಿದ ರಾಷ್ಟ್ರೀಯ ಮಟ್ಟದ ಸಿನಿಮೋತ್ಸವದಲ್ಲಿ ಬೆಸ್ಟ್ ಫಿಲಂ, ಬೆಸ್ಟ್ ಡೈರೆಕ್ಟರ್ ಹಾಗೂ ಬೆಸ್ಟ್ ಸ್ಟೋರಿ ವಿಭಾಗ ದಲ್ಲಿ ಪ್ರಶಸ್ತಿಗಳು ಹಾಗೂ ಒನ್ ಲೀಫ್ ಇಂಟನ್ರ್ಯಾಷನಲ್ ಫೆಸ್ಟಿವಲ್ ನಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ, ಬೆಸ್ಟ್ ಸೋಶಿಯಲ್ ಫಿಲಂ, ಬೆಸ್ಟ್ ಸಿನಿಮೋಟೋಗ್ರಾಪೆರ್ ಎಂಬ ಪ್ರಶಸ್ತಿ ಮತ್ತು ಕನಕ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಬೆಸ್ಟ್ ಡೈರೆಕ್ಟರ್ ಪ್ರಶಸ್ತಿ ಗೆದ್ದುಕೊಂಡಿದೆ.
7 ಸಿಸ್ಟರ್ ನಾರ್ತ್ ಈಸ್ಟ್ ಇಂಟರ್ ನ್ಯಾಷನಲ್ ಫಿಲಂ ಫೆಸ್ಟಿವಲ್ ನಲ್ಲಿ ಬೆಸ್ಟ್ ಫೀಚರ್ ಫಿಲಂ, ಬೆಸ್ಟ್ ಡೈರೆಕ್ಟರ್, ಬೆಸ್ಟ್ ಸೋಶಿಯಲ್ ಫಿಲಂ, ಬೆಸ್ಟ್ ಆರ್ಟ್ ಸಿನಿಮಾ ಪ್ರಶಸ್ತಿ, ಇಂಡಿಯನ್ ಕ್ರಿಯೇಟಿವ್ ಮೈಂಡ್ ಫಿಲಂ ಫೆಸ್ಟಿವಲ್ ನಲ್ಲಿ ವರ್ಷದ ಅತ್ಯುತ್ತಮ ಚಿತ್ರ, ಉತ್ತಮ ಕಥೆ, ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ, ಬೆಲ್ಜಿಯಂ ನ ಫ್ರೆಂಚ್ ಇಂಟರ್ ನ್ಯಾಷನಲ್ ಸಿನಿ ಅವಾಡ್ರ್ಸ್ ನಲ್ಲಿ ಬೆಸ್ಟ್ ಕಾನ್ಸೆಪ್ಟ್, ಬೆಸ್ಟ್ ಥಾಟ್ಫುಲ್ ಸಿನಿಮಾ, ಬೆಸ್ಟ್ ಸಿನಿಮಾಟೋಗ್ರಫಿ, ಬೆಸ್ಟ್ ಸ್ಟೋರಿ, ದಾಂಭಡ್ ಸಿನಿಮೋತ್ಸವದಲ್ಲಿ ಬೆಸ್ಟ್ ರ್ರಟಿವ್, ಬೆಸ್ಟ್ ಫೀಚರ್ ಹಾಗೂ ಬೆಸ್ಟ್ ಎಕ್ಸ್ ಪೆರಿಮೆಂಟಲ್ ಸಿನಿಮಾ ಪ್ರಶಸ್ತಿಗಳು ಸೇರಿದಂತೆ ಈವರೆಗೆ 62 ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದು ಬೀಗಿದೆ ಎಂದು ಹರಿಣಿ ವಿಜಯ್ ವಿವರಿಸಿದರು.
ಸಹ ನಿರ್ಮಾಪಕಿ ಕೊಟ್ಟುಕತ್ತಿರ ಯಶೋಧ ಪ್ರಕಾಶ್ ಮಾತನಾಡಿ ಚಿತ್ರಕ್ಕೆ ದೊರೆತ್ತಿರುವ ಪ್ರಶಸ್ತಿಗಳು ಮತ್ತಷ್ಟು ಸಿನಿಮಾಗಳ ನಿರ್ಮಾಣಕ್ಕೆ ಹೊಸ ಸ್ಫೂರ್ತಿಯನ್ನು ತುಂಬಿದೆ. ಕೊಡವ ಸಿನಿಮಾವನ್ನು ಪ್ರತಿಯೊಬ್ಬರು ಕೊಡಗಿನ ಸಿನಿಮಾವೆಂದು ಸ್ವೀಕರಿಸಬೇಕು, ಕೇವಲ ಕೊಡವರಿಗಾಗಿ ಎಂದು ಭಾವಿಸಬಾರದೆಂದು ಮನವಿ ಮಾಡಿದರು.
ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಿಗೆ “ನಾಡ ಪೆದ ಆಶಾ” ಪ್ರವೇಶ ಪಡೆಯುವಂತೆ ನೋಡಿಕೊಳ್ಳುವಲ್ಲಿ ನಿರ್ಮಾಪಕಿ ಹರಿಣಿ ವಿಜಯ್ ಅವರ ಶ್ರಮ ಹೆಚ್ಚು ಇದೆ. ನಿರ್ದೇಶಕರ ಪ್ರಯತ್ನದಿಂದ ಚಿತ್ರ ಉತ್ತಮ ರೀತಿಯಲ್ಲಿ ಮೂಡಿ ಬಂದಿದೆ ಎಂದರು.
::: “ಪೊಮ್ಮಾಲೆ ಕೊಡಗ್” ಪ್ರದರ್ಶನ :::
ಕೊಟ್ಟುಕತ್ತಿರ ಯಶೋಧ ಪ್ರಕಾಶ್ ನಿರ್ಮಾಪಕರಾಗಿರುವ ಕೊಡವ ಮಕ್ಕಡ ಕೂಟ ಅರ್ಪಿಸುವ ಸ್ವಸ್ತಿಕ್ ಎಂಟರ್‍ಟೈನ್‍ಮೆಂಟ್ ಬ್ಯಾನರಡಿಯಲ್ಲಿ ನಿರ್ಮಾಣವಾಗಿರುವ ನಿರ್ದೇಶಕ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಅವರ “ವಿಧಿರ ಕಳಿಲ್” ಕಾದಂಬರಿ ಆಧಾರಿತ “ಪೊಮ್ಮಾಲೆ ಕೊಡಗ್” ಕೊಡವ ಚಲನಚಿತ್ರ ಮಾ.20 ರಿಂದ 27ರ ವರೆಗೆ ಪ್ರದರ್ಶನಗೊಳ್ಳಲಿದೆ. ಈಗಾಗಲೇ ಪ್ರೀಮಿಯರ್ ಶೋ ಆಗಿದೆ ಎಂದು ತಿಳಿಸಿದರು.
ಮಾ.20 ರಂದು ಬಾಳೆಲೆ ಕೊಡವ ಸಮಾಜ, ಮಾ.22 ಮತ್ತು 23 ರಂದು ಮೂರ್ನಾಡು ಕೊಡವ ಸಮಾಜ, ಮಾ.25, 26 ಹಾಗೂ 27 ರಂದು ನಾಪೋ ಕ್ಲು ಕೊಡವ ಸಮಾಜದಲ್ಲಿ ಪ್ರದರ್ಶನ ಕಾಣಲಿದೆ.
ಬೆಳಿಗ್ಗೆ 11 ಗಂಟೆ, ಸಂಜೆ 4 ಗಂಟೆ ಹಾಗೂ ಸಂಜೆ 6.30 ಗಂಟೆಗೆ ದಿನ ಮೂರು ಪ್ರದರ್ಶನಗೊಳ್ಳಲಿದೆ. ಕೊಡಗಿನ ಸಂಶೋಧನೆಗೆಂದು ಬಂದ ಯುವತಿಯೊಬ್ಬಳ ಸುತ್ತ ಹೆಣೆದ ಚಿತ್ರ ಇದಾಗಿದ್ದು, ಹಾಕತ್ತೂರಿನ ಅಮ್ಮಾಟಂಡ ಐನ್‍ಮನೆ ಸೇರಿದಂತೆ ಕೊಡಗಿನ ಸುಂದರತಾಣಗಳಲ್ಲಿ ಚಿತ್ರೀಕರಣಗೊಂಡಿದೆ ಎಂದು ಯಶೋಧ ಪ್ರಕಾಶ್ ತಿಳಿಸಿದರು.
ನಿರ್ದೇಶಕ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಮಾತನಾಡಿ “ನಾಡ ಪೆದ ಆಶಾ” ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಸೇರಿದಂತೆ ಕೊಡಗು ಜಿಲ್ಲೆ ಮತ್ತು ಹೊರ ಜಿಲ್ಲೆಯಲ್ಲಿ ಯಶಸ್ವಿ 150 ಪ್ರದರ್ಶನಗಳನ್ನು ಕಂಡಿದೆ ಎಂದರು.
ಸಿನಿಮಾ ರಂಗಕ್ಕೆ ಹೆಚ್ಚು ಸಂಖ್ಯೆಯಲ್ಲಿ ಮಹಿಳಾ ನಿರ್ಮಾಪಕರು ಬರುತ್ತಿರುವುದು ಸಂತಸದ ವಿಚಾರವಾಗಿದ್ದು, ಪ್ರಶಸ್ತಿಗಳು ಸ್ಫೂರ್ತಿಯನ್ನು ತುಂಬುತ್ತವೆ. ಮತ್ತಷ್ಟು ಚಿತ್ರಗಳನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವುದು ನನ್ನ ಗುರಿಯಾಗಿದೆ ಎಂದು ತಿಳಿಸಿದರು.
ಗೋವಾ ಮತ್ತು ಕೊಲ್ಕತ್ತ ಏಷಿಯನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದ್ದ ನನ್ನದೇ ನಿರ್ದೇಶನದ “ಪೊಮ್ಮಾಲೆ ಕೊಡಗ್” ಕೊಡಗಿನಲ್ಲಿ ಪ್ರದರ್ಶನಗೊಳ್ಳಲಿದೆ. 100 ಪ್ರದರ್ಶನಗಳನ್ನು ಕಾಣುವ ನಿರೀಕ್ಷೆ ಇದೆ ಎಂದು ಹೇಳಿದರು.
ತಾವು ಮತ್ತೊಂದು ಕೊಡವ ಚಿತ್ರ “ಬೇರ್” (ದಿ ರೂಟ್) ನ್ನು ನಿರ್ದೇಶಿಸುತ್ತಿದ್ದು, ಏ.6 ರಿಂದ ಚಿತ್ರೀಕರಣ ಆರಂಭಗೊಳ್ಳಲಿದೆ. ವಿಶ್ವದಲ್ಲಿರುವ ಸಣ್ಣಪುಟ್ಟ ಜಾತಿ, ಜನಾಂಗ, ಸಂಸ್ಕೃತಿ ನಶಿಸಿ ಹೋಗುತ್ತಿದ್ದು, ಇವುಗಳನ್ನು ಉಳಿಸುವ ಅನಿವಾರ್ಯತೆ ಯಾಕಿದೆ ಎನ್ನುವ ಬಗ್ಗೆ ಚಿತ್ರದಲ್ಲಿ ಪ್ರತಿಬಿಂಬಿಸಲಾಗುವುದು. ಇದು ಎಲ್ಲರಿಗೂ ಹೊಂದುವಂತಹ ಚಿತ್ರವಾಗಲಿದೆ ಎಂದರು.
“ನಾಡ ಪೆದ ಅಶಾ” ಚಿತ್ರದ ನಾಯಕ ನಟ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ 62 ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಚಿತ್ರ ಇತಿಹಾಸವನ್ನೇ ಸೃಷ್ಟಿಸಿದೆ. ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಅವರ ನಿರ್ದೇಶನದ “ಕೊಡಗರ್ ಸಿಪಾಯಿ” ಚಿತ್ರ ಬಿಡುಗಡೆಯಾದ ನಂತರ ಕೊಡಗಿನಲ್ಲಿ ಚಿತ್ರಗಳ ನಿರ್ಮಾಣ ಸಂಖ್ಯೆ ಹೆಚ್ಚಾಗಿದೆ. ಈ ಚಿತ್ರದ ನಂತರ 7 ಕೊಡವ ಸಿನಿಮಾಗಳು ನಿರ್ಮಾಣಗೊಂಡಿವೆ ಎಂದು ಹೇಳಿದರು.
ತಮಗೆ ಯೋಧನ ಪಾತ್ರ ನೀಡಿದ ಚಿತ್ರದ ನಿರ್ಮಾಪಕರು ಹಾಗೂ ನಿರ್ದೇಶಕರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
Breaking News
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*
- *ಕೊಡಗು ಕೃಷಿ ವಿಜ್ಞಾನ ವೇದಿಕೆಯ ಬೆಳ್ಳಿ ಮಹೋತ್ಸವ : ನ.26 ರಂದು ರೈತ ಮೇಳ*
- *ಡಿ.1 ರಂದು ಗಾಳಿಬೀಡುವಿನಲ್ಲಿ ಬಾಣೆ ಹಬ್ಬ*
- *ನ.26 ರಂದು ಮಡಿಕೇರಿಯಲ್ಲಿ ಜಿಕೀರ್, ಜಾರಿ ಮತ್ತು ನಾತೆ-ರಸುಲ್” ಗಾಯನ*
- *ವಿಶ್ವಾಸ್ ವೆಂಕಟ್ ಗೆ ಟೇಬಲ್ ಟೆನ್ನಿಸ್ ನಲ್ಲಿ ರನ್ನರ್ ಪ್ರಶಸ್ತಿ*