ಮಡಿಕೇರಿ ಮಾ.14 : ಪ್ರಧಾನ ಮಂತ್ರಿಗಳ ಮಾರ್ಗದರ್ಶನ ಮತ್ತು ಸ್ಫೂರ್ತಿ ಯಿಂದ ಭಾರತ 75ನೇ ವರ್ಷದ ಸ್ಮರಣಾರ್ಥವಾಗಿ “ ಆಜಾಧೀ ಕಾ ಅಮೃತ ಮಹೋತ್ಸವ” ವನ್ನು ಆಚರಿಸುತ್ತಿದೆ. ಭಾರತದ ಇತಿಹಾಸದಲ್ಲಿ ಖ್ಯಾತಿ ಪಡೆದ ಗಣ್ಯರ ಸಾಧನೆಗಳನ್ನು ಜನರಿಗೆ ತಿಳಿಸುವ ಪ್ರಯತ್ನದೊಂದಿಗೆ, ನರೇಂದ್ರ ಮೋದೀಜಿ ರವರು ಸ್ವಾತಂತ್ರ್ಯ ದಿನಾಚರಣೆಯ ತಮ್ಮ ಭಾಷಣದಲ್ಲಿ “ ಪಂಚ ಪ್ರಾಣ್ “ ಎನ್ನುವ ಮಂತ್ರವನ್ನು ಘೋಷಿಸಿದ್ದಾರೆ. ಅಮೃತ ಕಾಲ ಇಂಡಿಯಾ@2047 ಎನ್ನುವ ದೃಷ್ಠಿಕೋನವನ್ನು ಜನತೆಯ ಮುಂದಿಟ್ಟಿದ್ದಾರೆ.
ಈ ಸಂದರ್ಭದಲ್ಲಿ ಭಾರತ ಸರ್ಕಾರದ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ ಸಂಘಟನೆಯು “ ‘ಯುವ ಸಂವಾದ’ ಇಂಡಿಯಾ@2047” ಎನ್ನುವ ಹೊಸ ಕಾರ್ಯಕ್ರಮವನ್ನು ಹೊರ ತಂದಿದ್ದು, ಸಮುದಾಯ ಅಭಿವೃದಿ ಆಧಾರಿತ ಸಂಸ್ಥೆಗಳ ಸಹಯೋಗದಲ್ಲಿ ಭಾರತದ ಎಲ್ಲಾ ಜಿಲ್ಲೆಗಳಲ್ಲಿ ದಿನಾಂಕ 1-4-2023 ರಿಂದ 31-5-2023 ನೇ ದಿನಾಂಕದ ವರೆಗೆ ಈ ಕಾರ್ಯಕ್ರಮವನ್ನು ಆಚರಿಸಲು ಉದ್ದೇಶಿಸಿದೆ.
ಈ ಕಾರ್ಯಕ್ರಮವನ್ನು ಜಿಲ್ಲಾ ಮಟ್ಟದಲ್ಲಿ ಸಮುದಾಯ ಅಭಿವೃದ್ದಿ ಸಂಸ್ಥೆಗಳ (CBOs) ಸಹಯೋಗದಲ್ಲಿ ಆಚರಿಸಲು ಯೋಜನೆ ರೂಪಿಸಿದ್ದು, ಜಿಲ್ಲಾ ನೆಹರು ಯುವ ಕೇಂದ್ರಗಳ ಕೈಜೋಡಿಸಿ – ದೇಶದ ಭವಿಷ್ಯದ ಬಗ್ಗೆ ಸಕಾರಾತ್ಮಕವಾಗಿ ಚಿಂತಿಸಿ, ಪ್ರಧಾನ ಮಂತ್ರಿಗಳ ಆಶಯದಂತೆ “ ಪಂಚ ಪ್ರಾಣ್ ” ಯೋಜನೆಯನ್ನು ವ್ಯವಸ್ಥಿತ ಗುರಿಯೊಂದಿಗೆ ಸಾಧಿಸಬೇಕಾಗಿದೆ.
ಈ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ತುಂಬಾ ನುರಿತ, ಉತ್ತಮ ಜ್ಞಾನವುಳ್ಳ ಗಣ್ಯರನ್ನು ಸೇರಿಸಿಕೊಂಡು ಈ ಪಂಚ ಪ್ರಾಣ್ ಯೋಜನೆಯನ್ನು ಸುಮಾರು 500 ಕ್ಕೂ ಹೆಚ್ಚು ಯುವಜನರೊಡನೆ ಪ್ರಶ್ನೋತ್ತರದ ಮೂಲಕ ಸಂವಾದ ನಡೆಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿದೆ ಮತ್ತು ಪ್ರತಿ ಜಿಲ್ಲೆಯಲ್ಲಿ ಸಮುದಾಯ ಅಭಿವೃದ್ಧಿ ಸಂಸ್ಥೆಗಳ ಮೂಲಕ ಮೂರು ಕಾರ್ಯಕ್ರಮಗಳನ್ನು ನಡೆಸಲಾಗುವುದು. ಪ್ರತಿಯೊಂದು ಕಾರ್ಯಕ್ರಮಕ್ಕೆ ರೂ. 20,000/- ಸಾವಿರ ಅನುದಾನವನ್ನು ನಿಗದಿಪಡಿಸಲಾಗಿದೆ. ಈ ಅನುದಾನವನ್ನು ಸಮುದಾಯ ಅಭಿವೃದ್ಧಿ ಸಂಸ್ಥೆಗಳಿಗೆ ಕೊಡಲಾಗುವುದು.
ಆದುದರಿಂದ ಸಮುದಾಯ ಅಭಿವೃದ್ಧಿ ಸಂಸ್ಥೆಗಳು ಯಾವುದೇ ರಾಜಕೀಯ ಪಕ್ಷವಲ್ಲದ ಪಕ್ಷಪಾತವಿಲ್ಲದ ಮತ್ತು ಜಾತಿ ಬೇಧವಿಲ್ಲದೆ ಕಾರ್ಯನಿರ್ವಹಿಸುತ್ತಿರುವ ಮತ್ತು ಉತ್ತಮವಾಗಿ ಕಾರ್ಯಕ್ರಮವನ್ನು ಆಯೋಜಿಸಲು ಶಕ್ತವಾಗಿರುವ ಕೊಡಗು ಜಿಲ್ಲೆಯ “ ಸಮುದಾಯ ಅಭಿವೃದ್ಧಿ ಸಂಸ್ಥೆಗಳು” ಈ ಯುವ ಸಂವಾದ ಕಾರ್ಯಕ್ರವನ್ನು ನಡೆಸಲು ಮುಂದೆ ಬರಬಹುದು. ಈ ಸಂಸ್ಥೆಗಳ ಮೇಲೆ ಯಾವುದೇ ಕ್ರಿಮಿನಲ್ ಮೊಕದ್ದಮೆಗಳು ಅಥವಾ ಸುಸ್ತಿದಾರರಲ್ಲದ 3 ಸಂಸ್ಥೆಗಳನ್ನು ಕೊಡಗು ಜಿಲ್ಲೆಯಿಂದ ಆಯ್ಕೆ ಮಾಡಲಾಗುವುದು.
ಆಸಕ್ತಿ ಇರುವ ಕೊಡಗು ಜಿಲ್ಲೆಯ ಸಮುದಾಯ ಅಭಿವೃದ್ಧಿ ಸಂಸ್ಥೆಗಳು ನಿಗದಿತ ಅರ್ಜಿ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿಗಳು ಜಿಲ್ಲಾ ನೆಹರು ಯುವ ಕೇಂದ್ರ ಕೊಡಗು ಇಲ್ಲಿ ಕೊಡಲಾಗುವುದು. ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಕೇಳಿರುವ ಎಲ್ಲಾ ವಿವರಗಳನ್ನು ದಾಖಲೆಗಳ ಸಮೇತ ದಿನಾಂಕ 29-3-2023 ರಂದು ಸಂಜೆ 5 ಗಂಟೆಯೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಛೇರಿ ವಿಳಾಸ: ಜಿಲ್ಲಾ ಯುವ ಅಧಿಕಾರಿ, ನೆಹರು ಯುವ ಕೇಂದ್ರ, ಕೊಡಗು, ನೆಹರು ಯುವ ಕೇಂದ್ರ, ಯಶು ನಿಲಯ, ಬ್ಲಾಕ್ ನಂ: 08, ಕಾವೇರಿ ಲೇಔಟ್,ಮಡಿಕೇರಿ -571201. ಕಛೇರಿ ದೂರವಾಣಿ ಸಂಖ್ಯೆ: 08272-225470 ಮೊ. ಸಂಖ್ಯೆ.9961332968 ಕರೆಮಾಡಬಹುದು.
(ಉಲ್ಲಾಸ್ ಕೆ.ಟಿ.ಕೆ)
ಜಿಲ್ಲಾ ಯುವ ಅಧಿಕಾರಿ
ನೆಹರು ಯುವ ಕೇಂದ್ರ,ಮಡಿಕೇರಿ