ವಿರಾಜಪೇಟೆ ಸೆ.22 NEWS DESK : ಹಬ್ಬಗಳನ್ನು ಎಲ್ಲರೊಂದಿಗೆ ಒಗ್ಗಟ್ಟಾಗಿ ಸೇರಿ ಆಚರಿಸುವುದರಿಂದ ಸಿಗುವ ಸಂತಸವೇ ವಿಭಿನ್ನ ಎಂದು ವಿರಾಜಪೇಟೆ ಕೊಡವ ಸಮಾಜದ ಕೊಡವ ಪೊಮ್ಮಕ್ಕಡ ಒಕ್ಕೂಟದ ಅಧ್ಯಕ್ಷೆ ತಾತಂಡ ಜ್ಯೋತಿ ಪ್ರಕಾಶ್ ಹೇಳಿದರು. ವಿರಾಜಪೇಟೆಯ ಕೊಡವ ಸಮಾಜದಲ್ಲಿ ಕೊಡವ ಪೊಮ್ಮಕ್ಕಡ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಕೈಲ್ ಪೊಲ್ಧ್ ನಮ್ಮೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೈಲ್ ಪೊಲ್ಧ್ ಹಬ್ಬವು ತನ್ನದೇ ಆದ ವೈಶಿಷ್ಟ್ಯ ಹೊಂದಿದ್ದು, ಕೃಷಿ ಕ್ಷೇತ್ರಕ್ಕೆ ಪ್ರಾಮುಖ್ಯತೆ ನೀಡುವ ಹಬ್ಬವಾಗಿದೆ. ಜನರೆಲ್ಲರೂ ಒಂದೆಡೆ ಸೇರಿ ಸಂಭ್ರಮದಿಂದ ಆಚರಿಸುವ ಮೂಲಕ ಹಬ್ಬದ ಸಡಗರ ಹೆಚ್ಚುತ್ತದೆ. ಒಕ್ಕೂಟದ ವತಿಯಿಂದ ಈ ಬಾರಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಸರ್ವ ಸದಸ್ಯರು ಸಹಕಾರ ನೀಡಿದ್ದಾರೆ ಎಂದು ಹೇಳಿದರು. ಒಕ್ಕೂಟದ ಸದಸ್ಯರೆಲ್ಲರೂ ಸಭೆ, ಸಮಾರಂಭಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಸದಸ್ಯರು ತಮ್ಮ ಮನೆಯ ಕರ್ತವ್ಯಗಳನ್ನು ನಿಭಾಯಿಸುವ ರೀತಿಯಲ್ಲಿಯೇ ಒಕ್ಕೂಟದ ಜವಾಬ್ದಾರಿಗಳನ್ನೂ ನಿರ್ವಹಿಸಿದಲ್ಲಿ ಸಂಘಟನೆ ಮತ್ತಷ್ಟು ಯಶಸ್ಸು ಕಾಣಲು ಸಾಧ್ಯವಾಗುತ್ತದೆ. ಎಲ್ಲರೂ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಸರ್ವರಿಗೂ ಕೈಲ್ ಪೊಲ್ಧ್ ನಮ್ಮೆಯ ಶುಭಾಶಯಗಳನ್ನು ತಿಳಿಸಿದರು. ಭೋಜಕ್ಕ ತಂಡದ ನಾಯಕಿ ಮಾಲೇಟಿರ ಸ್ವಾತಿ ಕುಶಾಲಪ್ಪ ಅವರು ಕೈಲ್ ಪೊಲ್ಧ್ ಹಬ್ಬದ ಮಹತ್ವದ ಕುರಿತು ಮಾತನಾಡಿ ಶುಭ ಹಾರೈಸಿದರು. :: ವಿವಿಧ ಸ್ಪರ್ಧೆಗಳು :: ಹಬ್ಬದ ಅಂಗವಾಗಿ ವಾಲಗ ಆಟ್, ಕಾಲ್ ಚೆಂಡು ಹಾಗೂ ತೆಂಗಿನಕಾಯಿ ಗುರಿ ಸೇರಿದಂತೆ ವಿವಿಧ ಸಾಂಸ್ಕೃತಿಕ ಹಾಗೂ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಾಲಗ ಆಟ್ ಸ್ಪರ್ಧೆಯಲ್ಲಿ ಐಚಂಡ ವೀಣಾ ಪ್ರಥಮ, ಪುಡಿಯಂಡ ಲಲಿತ ದ್ವಿತೀಯ ಹಾಗೂ ಕರೋಟಿರ ಶಶಿ ಸುಬ್ರಮಣ್ಯ ತೃತೀಯ ಬಹುಮಾನ ಪಡೆದರು. ಕಾಲ್ ಚೆಂಡು ಸ್ಪರ್ಧೆಯಲ್ಲಿ ಕುಂಇರ ಚಿತ್ರ ಪ್ರಥಮ, ಪುಗ್ಗೇರ ಭವಾನಿ ದ್ವಿತೀಯ ಹಾಗೂ ಕುಪ್ಪಚಿರ ಕವಿತಾ ತೃತೀಯ ಸ್ಥಾನ ಗಳಿಸಿದರು. ತೆಂಗಿನಕಾಯಿ ಗುರಿ ಸ್ಪರ್ಧೆಯಲ್ಲಿ ಮಾಚೆಟ್ಟಿರ ರುಕ್ಮಿಣಿ ಪ್ರಥಮ ಹಾಗೂ ಅಲ್ಲಪಂಡ ತಾರ ದ್ವಿತೀಯ ಬಹುಮಾನ ಪಡೆದರು. ವಿಜೇತರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ಕುಂಇರ ಚಿತ್ರ ಅವರು ಕಾರ್ಯಕ್ರಮದ ವರದಿ ಮಂಡಿಸಿದರು. ತಾತಂಡ ಯಶು ಕಬೀರ್ ಲೆಕ್ಕಪತ್ರ ಮಂಡಿಸಿದರು. ಮಂಡೇಪಂಡ ಶರೀನ್ ಹಾಗೂ ಕರ್ನಾಂಡ ಪ್ರಮೀಳಾ ಪ್ರಾರ್ಥಿಸಿದರು. ಐನಂಡ ಜಮುನಾ ಸ್ವಾಗತಿಸಿದರು. ಕರೋಟಿರ ಶಶಿ ಸುಬ್ರಮಣ್ಯ ನಿರೂಪಿಸಿದರು. ಕರ್ನಾಂಡ ಪ್ರಮೀಳಾ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಸರ್ವರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಸದಸ್ಯರು ತಾವು ತಯಾರಿಸಿದ ವಿವಿಧ ವಸ್ತುಗಳ ಮಳಿಗೆಗಳನ್ನು ತೆರೆದಿದ್ದರು. ಕಾರ್ಯಕ್ರಮದಲ್ಲಿ ವಿರಾಜಪೇಟೆ ಕೊಡವ ಸಮಾಜದ ಕೊಡವ ಪೊಮ್ಮಕ್ಕಡ ಒಕ್ಕೂಟದ ಸರ್ವ ಸದಸ್ಯರು ಉಪಸ್ಥಿತರಿದ್ದರು.