ಮಡಿಕೇರಿ ಮಾ.14 : ಮಂಗಳೂರು- ಮಡಿಕೇರಿ ರಸ್ತೆಯಲ್ಲಿ ಮೀನು ಸಾಗಾಟ ಮಾಡುವ ಲಾರಿಗಳಿಂದ ಕಲುಷಿತ ನೀರು ಸೋರಿಕೆಯಾಗುತ್ತಿದ್ದು, ಮಾಲಿನ್ಯವನ್ನುಂಟು ಮಾಡುತ್ತಿದೆ ಎಂದು ಆರೋಪಿಸಿ ಮದೆನಾಡು ನಿವಾಸಿ ಜಿ.ಎ.ಇಬ್ರಾಹಿಂ ಎಂಬುವವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಹೆದ್ದಾರಿಯುದ್ದಕ್ಕೂ ಮೀನು ಸಾಗಾಟದ ಕಲುಷಿತ ನೀರು ಸೋರಿಕೆಯಾಗುತ್ತದೆ. ಇದರಿಂದ ಮಾಲಿನ್ಯ ಉಂಟಾಗುತ್ತದೆಯಲ್ಲದೆ ರೋಗ ರುಜಿಗಳು ಹರಡುವ ಭೀತಿ ಇದೆ. ಅಪಘಾತವೂ ಸಂಭವಿಸಬಹುದು ಎಂದು ದೂರಿನಲ್ಲಿ ತಿಳಿಸಿರುವ ಅವರು ವೈಜ್ಞಾನಿಕ ಕ್ರಮ ಅನುಸರಿಸದ ಲಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.










