ಮಡಿಕೇರಿ ಮಾ.14 : ಇಲ್ಲಿಗೆ ಸಮೀಪದ ಮಕ್ಕಂದೂರು ಗ್ರಾಮದ ಮಕ್ಕಂದೂರು ಕ್ರಿಕೆಟ್ ಕ್ಲಬ್ ವತಿಯಿಂದ ನಡೆಸಿಕೊಂಡು ಬರಲಾಗುತ್ತಿರುವ ಮಕ್ಕಂದೂರು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಮೂರನೇ ಆವೃತ್ತಿಯ ಚಾಂಪಿಯನ್ ಆಗಿ ಹಿಂದೂ ಕ್ರಿಕೆಟ್‌ಕ್ಲಬ್(ಹೆಚ್‌ಸಿಸಿ) ಹೊರ ಹೊಮ್ಮಿದೆ. ಭಜರಂಗಿ ಬಾಯ್ಸ್ ತಂಡ ದ್ವಿತೀಯ ಸ್ಥಾನ ಗಳಿಸಿದರೆ, ರಾಯಲ್ ಟೈರ‍್ಸ್ ತಂಡ ತೃತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.
ಮಕ್ಕಂದೂರು ಶ್ರೀ ಭದ್ರಕಾಳೇಶ್ವರಿ ದೇವಾಲಯದ ಬಳಿಯ ಮೈದಾನದಲ್ಲಿ ನಡೆದ ಪಂದ್ಯಾವಳಿಯಲ್ಲಿ ಹೆಚ್‌ಸಿಸಿ, ಭಜರಂಗಿ ಬಾಯ್ಸ್, ರಾಯಲ್ ಟೈರ‍್ಸ್, ಟೀಂ ಟೈಟಾನ್ಸ್, ಸ್ಟಾರ್ ಲೈಟ್, ಶಿವಾಜಿ ಫ್ರೆಂಡ್ಸ್, ಧರ್ಮಶಾಸ್ಥ ಹಾಗೂ ಟೀಂ ರೆಬೆಲ್ಸ್ ತಂಡಗಳು ಭಾಗವಹಿಸಿದ್ದವು. ಈ ಪೈಕಿ ಕ್ವಾಲಿಫೈರ್ ಹಂತದಲ್ಲಿ ಫೈನಲ್‌ಗೇರಿದ ಕಿರುವಾಲೆ ಪವನ್ ಮಾಲೀಕತ್ವದ ಶಾಂತೆಯಂಡ ಲೂತನ್ ನಾಯಕನಾಗಿದ್ದ ಹೆಚ್‌ಸಿಸಿ ಹಾಗೂ ಲಕ್ಕಪ್ಪನ ವಿಜೇತ ಮಾಲೀಕ ಹಾಗೂ ನಾಯಕತ್ವದ ದಿನೇಶ್ ನಾಯಕನಾಗಿದ್ದ ಭಜರಂಗಿ ಬಾಯ್ಸ್ ತಂಡಗಳ ನಡುವೆ ಪಂದ್ಯಾಟ ನಡೆದು ಹೆಚ್‌ಸಿಸಿ ತಂಡ ಜಯ ಗಳಿಸಿತು. ಭಜರಂಗಿ ಬಾಯ್ಸ್ ತಂಡ ದ್ವಿತೀಯ ಸ್ಥಾನ ಗಳಿಸಿದರೆ, ತಂಬುಕುತ್ತಿರ ಮಧು ಮಂದಣ್ಣ ಮಾಲೀಕತ್ವದ ರಾಯಲ್ ಟೈರ‍್ಸ್ ತಂಡ ತೃತೀಯ ಸ್ಥಾನ ಗಳಿಸಿತು. ಸರಣಿ ಪುರುಷೋತ್ತಮ ಪ್ರಶಸ್ತಿಯನ್ನು ಹೆಚ್‌ಸಿಸಿಯ ಲೂತನ್ ಪಡೆದುಕೊಂಡರೆ, ಉತ್ತಮ ಬ್ಯಾಟ್ಸ್ ಮೆನ್ ಹಾಗೂ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಪ್ರಶಸ್ತಿಯನ್ನು ರಾಯಲ್ ಟೈರ‍್ಸ್ನ ಸಬ್ಬುಡ ಕಾರ್ಯಪ್ಪ ಪಡೆದುಕೊಂಡರು. ಉತ್ತಮ ಬೌಲರ್ ಆಗಿ ಭಜರಂಗಿ ಬಾಯ್ಸ್ ನ ಬಿ.ಜೆ.ಲೋಹಿತ್(ಅಣ್ಣು), ಉತ್ತಮ ಕ್ಷೇತ್ರ ರಕ್ಷಕನಾಗಿ ಟೀಂ ರೆಬೆಲ್ಸ್ ನ ರಂಜು, ಉತ್ತಮ ಕ್ಯಾಚರ್ ಆಗಿ ಟೀಂ ರೆಬೆಲ್ಸ್ನ ಸಚಿನ್ ಹಾಗೂ ಉದಯೋನ್ಮುಖ ಆಟಗಾರ ಪ್ರಶಸಿಯನ್ನು ಹೆಚ್‌ಸಿಸಿಯ ದೀಕ್ಷಿತ್, ಹಾಗೂ ಸ್ಟಾರ್ ಲೈಟ್‌ನ ಅಖಿಲೇಶ್(ಅಪ್ಪು) ಪಡೆದುಕೊಂಡರು.
ಸಮಾರಂಭದಲ್ಲಿ ಅತಿಥಿಗಳಾಗಿ ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಗ್ರಾಮ ಪಂಚಾಯ್ತಿ ಸದಸ್ಯರುಗಳಾದ ಬಿ.ಎನ್.ರಮೇಶ್ ಸುವರ್ಣ, ಕಟ್ಟೆಮನೆ ಗಣೇಶ್, ಬಿ.ಎಸ್.ವಿಮಲಾ ರವಿ, ಶ್ರೀ ಭದ್ರಕಾಳೇಶ್ವರಿ ದೇವಾಲಯ ಸಮಿತಿ ಅಧ್ಯಕ್ಷ ಲಕ್ಕಪ್ಪನ ಹರೀಶ್ ಗ್ರಾಮದ ಹಿರಿಯರಾದ ಚಂದ್ರಶೇಖರ್, ಗಂಗಾಧರ, ಕ್ಷೇವಿಯರ್ ಪಾಲ್ಗೊಂಡಿದ್ದರು. ಪಂದ್ಯಾವಳಿಯ ತೀರ್ಪುಗಾರರಾಗಿ ಮಡಿಕೇರಿಯ ನಿರಂಜನ್, ರೇಹಾನ್ ಹಾಗೂ ಕಿರಣ್ ಕಾರ್ಯನಿರ್ವಹಿಸಿದರೆ, ಶಿವು ಬಹುಮಾನ ವಿತರಣಾ ಕಾರ್ಯ ನಡೆಸಿಕೊಟ್ಟರು. ಕುಡೆಕಲ್ ಸಂತೊಷ್ ಕಾರ್ಯಕ್ರಮ ನಿರೂಪಿಸಿ, ವೀಕ್ಷಕ ವಿವರಣೆ ನೀಡಿದರು.
ಶ್ರಮದಾನ
ಪಂದ್ಯಾವಳಿ ಆರಂಭಕ್ಕೂ ಮುನ್ನ ವರ್ಷಂಪ್ರತಿಯಂತೆ ಗ್ರಾಮದ ಮುಖ್ಯರಸ್ತೆ ಬದಿ ಶ್ರದಾನದ ಮೂಲಕ ಸ್ವಚ್ಛತಾ ಕಾರ್ಯ ಮಾಡಲಾಯಿತು.