ಸೋಮವಾರಪೇಟೆ ಮಾ.14 : ಶ್ರೀ ಮುತ್ತಪ್ಪಸ್ವಾಮಿ ಹಾಗೂ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯ ಸಮಿತಿ ವತಿಯಿಂದ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ವಿಜೃಂಭಣೆಯ ಜಾತ್ರೋತ್ಸವ ಮಂಗಳವಾರದಂದು ಸಂಜೆ ತೆರೆ ಕಂಡಿತು.
ಪಟ್ಟಣ ಮಾತ್ರವಲ್ಲದೇ ಅಕ್ಕ ಪಕ್ಕದ ಗ್ರಾಮಸ್ಥರು ಉತ್ಸವದಲ್ಲಿ ಪಾಲ್ಗೊಂಡಿದ್ದರು. ಶ್ರೀ ಮುತ್ತಪ್ಪ, ಶ್ರೀ ತಿರುವಪ್ಪ, ಶ್ರೀ ವಿಷ್ಣುಮೂರ್ತಿ, ಶ್ರೀ ಭಗವತಿ, ಶ್ರೀ ರಕ್ತಚಾಮುಂಡಿ, ಶ್ರೀ ಕಂಡಕರ್ಣ, ಶ್ರೀ ಕರಿಂಗುಟ್ಟಿಶಾಸ್ತಾವು, ಶ್ರೀಪೊಟ್ಟನ್ ಶ್ರೀ ಗುಳಿಗನ್ ದೈವಗಳ ಕೋಲಗಳು ನಡೆದವು. ಧಾರ್ಮಿಕ ಉತ್ಸವದಲ್ಲಿ ಎಲ್ಲಾ ಜಾತಿ ಜನಾಂಗ ಮಾತ್ರವಲ್ಲದೆ, ಎಲ್ಲಾ ಧರ್ಮಿಯರೂ ಭಾಗವಹಿಸುವುದು ವಿಶೇಷವಾಗಿತ್ತು.ಭಕ್ತಾದಿಗಳಿಗೆ ಅನ್ನದಾನ ಏರ್ಪಡಿಸಲಾಗಿತ್ತು. ಪಟ್ಟಣದ ಮುಖ್ಯ ಬೀದಿಗಳಲ್ಲಿ ಸೋಮವಾರ ರಾತ್ರಿ ಸಿಂಗಾರಿಮೇಳ ಮೆರವಣಿಗೆ ನಡೆಯಿತು.








