ಮಡಿಕೇರಿ ಮಾ.16 : ರಾಜ್ಯದ ಪ್ರಥಮ ಕ್ರೀಡಾಶಾಲೆಯಾದ ಕೂಡಿಗೆ ಕ್ರೀಡಾಶಾಲೆಯಲ್ಲಿ 36 ವಷ೯ಗಳ ಕಾಲ ಶಿಕ್ಷಕಿಯಾಗಿ ಕಾಯ೯ನಿವ೯ಹಿಸಿದ್ದ ಕುಂತಿ ಬೋಪಯ್ಯ ಅವರ ಸೇವಾ ಸಾಧನೆ ಸಂಬಂಧಿತ ಸಾಕ್ಷ್ಯ ಚಿತ್ರ “ಕುಂತಿ ಟೀಚರ್” ಮಾ.19 ರಂದು ಮಡಿಕೇರಿಯಲ್ಲಿ ತೆರೆಕಾಣಲಿದೆ.
ಮಡಿಕೇರಿಯ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಮಾ.19 ರಂದು ಸಂಜೆ 6 ಗಂಟೆಗೆ ಆಯೋಜಿತ ಕಾಯ೯ಕ್ರಮದಲ್ಲಿ ಸಾಕ್ಷ್ಯ ಚಿತ್ರವನ್ನು ಚಿಂತಕರಾದ ಡಾ.ಎಂ.ಜಿ.ಪಾಟ್ಕರ್, ಭಾರತೀಯ ವಿದ್ಯಾಭವನ ಕೊಡಗು ಘಟಕದ ಅಧ್ಯಕ್ಷ ಕೆ.ಎಸ್.ದೇವಯ್ಯ ಲೋಕಾಪ೯ಣೆ ಮಾಡಲಿದ್ದಾರೆ.
ಕುಂತಿ ಅವರು ಕ್ರೀಡಾ ಶಾಲೆಯಲ್ಲಿ ದಾಖಲೆ ಅವಧಿಗೆ ಸೇವೆ ಸಲ್ಲಿಸಿದ ಕೀತಿ೯ ಹೊಂದಿದ್ದು, ಗ್ರಾಮೀಣ ಪ್ರದೇಶದ ಕ್ರೀಡಾಶಾಲೆಯ ಉನ್ನತಿಗೆ ಅವರು ಶ್ರಮಿಸಿದ ರೀತಿಯನ್ನು ಸಾಕ್ಷ್ಯ ಚಿತ್ರದಲ್ಲಿ ಬಿಂಬಿತವಾಗಿದೆ. ಕುಂತಿ ಅವರ ಕುರಿತು ಶಾಲೆಯ ಶಿಕ್ಷಕ ವಗ೯, ವಿದ್ಯಾಥಿ೯ಗಳು, ನಿಕಟ ವತಿ೯ಗಳ ಹೇಳಿಕೆಯನ್ನು 50 ನಿಮಿಷದ ಈ ಚಿತ್ರ ಹೊಂದಿದೆ. ಸಾಕ್ಷ್ಯ ಚಿತ್ರವನ್ನು ಪತ್ರಕತ೯ ಅನಿಲ್ ಎಚ್.ಟಿ. ನಿದೇ೯ಶನ ಮಾಡಿದ್ದು, ವಿರಾಜಪೇಟೆಯ ಸಂಕೇತ್ ಸ್ಟುಡಿಯೋದಲ್ಲಿ ಸಂಕಲನ ಮಾಡಲಾಗಿದೆ.