ಮಡಿಕೇರಿ ಮಾ.16 : ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಕೊಡಗು ಜಿಲ್ಲಾ ಮಹಾಸಭೆ ಹಾಗೂ ಪುನಾರಚನೆ ಸಮಾವೇಶವು ಕುಶಾಲನಗರದಲ್ಲಿ ನಡೆಯಿತು.
ಕುಶಾಲನಗರದ ಬಿಜಿಟಿ ಆಡಿಟೋರಿಯಮ್ ನಲ್ಲಿ ರಾಜ್ಯ ನಾಯಕ ಕೆ.ಎ.ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಅವರ ನೇತೃತ್ವದಲ್ಲಿ ನಡೆದ ಸಭೆಯನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಫೀಳ್ ಸಅದಿ ಉದ್ಘಾಟಿಸಿದರು.
ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಕೊಳಕೇರಿ, ಪ್ರಧಾನ ಕಾರ್ಯದರ್ಶಿಯಾಗಿ ಆಹ್ಮದ್ ಮದನಿ ಗುಂಡಿಕೆರೆ, ಕೋಶಾಧಿಕಾರಿಯಾಗಿ ಅಬ್ದುಲ್ಲ ನೆಲ್ಲಿಹುದಿಕೇರಿ, ಉಪಧ್ಯಕ್ಷರಾಗಿ ಅಬೂಬಕ್ಕರ್ ಮದನಿ ಮಾಲ್ದಾರಿ, ಕಾರ್ಯದರ್ಶಿಗಳಾಗಿ (ದಅ್‌ವಾ) ಅಬ್ದುಲ್ ಅಝೀಜ್ ಸಖಾಫಿ ಕೊಡಲಿಪೇಟೆ (ಸಂಘಟನೆ) ಯಾಕೂಬ್ ಮಾಸ್ಟರ್ ಕೊಳಕೇರಿ (ಸಾಂತ್ವನ) ಅಝೀಝ್ ಮುಸ್ಲಿಯಾರ್ ಮಾಲ್ದರಿ (ಸೋಷಿಯಲ್) ಅರಾಫತ್ ನಾಪೊಕ್ಲು
(ಕಲ್ಚರಲ್) ಹಸೈನಾರ್ ಮುಸ್ಲಿಯಾರ್ ಸುಂಟಿಕೊಪ್ಪ (ಇಸಾಬಾ) ಶರೀಫ್ ಹೊಸತೋಟ ಎಂಬವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಯ್ಯಿದ್ ಇಲ್ಯಾಸ್ ಅಲ್ ಹೈದ್ರೋಸಿ ತಙ್ಙಳ್ ಎರುಮಾಡ್, ವಿ.ಪಿ.ಮೊಯ್ದೀನ್ ಪೊನ್ನತ್ ಮೊಟ್ಟೆ, ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ, ಸಮದ್ ನಿಝಾಮಿ ಕಲ್ಕಂದೂರು, ಸಕೀರ್ ಮಾಸ್ಟರ್ ಪೊನ್ನತ್ ಮೊಟ್ಟೆ, ಶಿಹಾಬ್ ಲತೀಫಿ 40 ಏಕರೆ, ಉಸ್ಮಾನ್ ತಾವೂರು, ಮುನೀರ್ ಮಹ್ಳರಿ ಪಡಿಯಾಣಿ, ಅಶ್ರಫ್ ಎರುಮಾಡ್, ಶಂಸುದ್ದೀನ್ ಅಂಜದಿ ಬಲಮುರಿ, ಸಲಾಂ ಪಿ.ಕೆ.ಗೋಣಿಕೊಪ್ಪ, ಸಲಾಂ ಇಂಪೋಪಾರ್ಕ್ ಗೋಣಿಕೊಪ್ಪ, ಅಲಿ ಸಅದಿ ಹುಂಡಿ ಅವರನ್ನು ನೇಮಕ ಮಾಡಲಾಯಿತು.
ನಾಯಿಬ್ ಖಾಝಿ ಶಾದುಲಿ ಫೈಝಿ ನೂತನ ಸಮಿತಿಯನ್ನು ಘೋಷಿಸಿದರು. ನಿಕಟ ಪೂರ್ವ ಅಧ್ಯಕ್ಷ ಸಯ್ಯಿದ್ ಇಲ್ಯಾಸ್ ತಂಗಲ್ ಅಧ್ಯಕ್ಷತೆ ವಹಿಸಿದರು. ನಿಕಟ ಪೂರ್ವ ಕಾರ್ಯದರ್ಶಿ ಮೊಯ್ದಿನ್ ಪೊನ್ನತ್ತ್ ಮೊಟ್ಟೆ ಸ್ವಾಗತಿಸಿ, ಸರ್ವರನ್ನು ವಂದಿಸಿದರು.