ಮಡಿಕೇರಿ ಮಾ.16 : ಭವಿಷ್ಯದ ಪೀಳಿಗೆಗಾಗಿ ಯಾಗಗಳು ಮತ್ತು ಹೋಮಗಳ ಕುರಿತು ಸಿದ್ದಾಪುರದಲ್ಲಿ ಮಾ.26 ರಂದು ದೈವಿಕ ಪ್ರವಚನ ನಡೆಯಲಿದೆ ಎಂದು ಕಾರ್ಯಕ್ರಮದ ಸಂಚಾಲಕಿ ನಡಿಕೇರಿಯಂಡ ಸ್ವಾತಿ ಮಂದಣ್ಣ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದಾಪುರದ ಸ್ವರ್ಣಮಾಲಾ ಸಭಾಂಗಣದಲ್ಲಿ ಬೆಳಿಗ್ಗೆ 9.30 ರಿಂದ ಸಂಜೆ 4 ಗಂಟೆವರೆಗೆ ಕಾರ್ಯಕ್ರಮ ನಡೆಯಲಿದ್ದು, ಕಣ್ಣೂರಿನ ರಿಷಿದೇವ್ ಫೌಂಡೇಶನ್‍ನ ಸ್ಥಾಪಕ ಹಾಗೂ ಮುಖ್ಯ ಪೋಷಕ ಸದ್ಗುರು ಋಷಿದೇವ್ ಶ್ರೀ ನರೇಂದ್ರನ್ ಜೀ ಅವರು ದೈವಿಕ ಪ್ರವಚ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಬೆಂಗಳೂರಿನ ವಾಟರ್ ಟೆಕ್ನಾಲಜೀಸ್ ಪ್ರೈ.ಲಿ ನ ನಿರ್ದೇಶಕ ಡಾ.ಕೃಷ್ಣ ಮಾದಪ್ಪ ನೈಸರ್ಗಿಕ ಬುದ್ಧಿವಂತಿಕೆ ಮತ್ತು ಪವಿತ್ರ ವಿಜ್ಞಾನಗಳ ಛೇದಕ : ಮಾನವೀಯತೆ ಮತ್ತು ಪರಿಸರದ ಮೇಲೆ ಯಾಗಗಳು ಮತ್ತು ಹೋಮಗಳ ಪ್ರಭಾವ ಎಂಬ ವಿಷಯದ ಕುರಿತು ಮಾತನಾಡಲಿದ್ದು, ಆಧ್ಯಾತ್ಮಿಕ ಚಿಂತಕರಾದ ಶಾರದಾ ಶ್ರೀಧರ್ ಗುರುತ್ವಂ ಎಂಬ ವಿಷಯದ ಕುರಿತು ಮಾಹಿತಿ ನೀಡಲಿದ್ದಾರೆ ಎಂದರು.
ಕಣ್ಣೂರಿನ ರಿಷಿದೇವ್ ಫೌಂಡೇಶನ್‍ನ ಪ್ರಧಾನ ಕಾರ್ಯದರ್ಶಿ ಬಾಬು ಕೇಶವನ್ ಊರ್ಜಮೇವ ಬ್ರಹ್ಮ ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಸಕ್ತಿ ಹೊಂದಿರುವವರು ಮಾ.24ರ ಒಳಗಾಗಿ ನೋಂದಣಿ ಶುಲ್ಕ ರೂ.500 ಪಾವತಿಸಿ ಹೆಸರು ನೋಂದಾಯಿಸಿಕೊಳ್ಳುವಂತೆ ತಿಳಿಸಿದರು. ಹೆಚ್ಚಿನ ಮಾಹಿತಿಗೆ ಆಸಕ್ತರು ಸ್ವಾತಿ ಮಂದಣ್ಣ-9886278790 ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.