ಕುಶಲನಗರ ಮಾ.17 : ಕುಶಾಲನಗರ ಲಯನ್ಸ್ ಕ್ಲಬ್ ಮತ್ತು ಗೌಡ ಸಮಾಜ ಆಶ್ರಯದಲ್ಲಿ ಡಾ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬ ಅಂಗವಾಗಿ ರಕ್ತದಾನ ಶಿಬಿರ ನಡೆಯಿತು. ಕುಶಾಲನಗರದ ಗೌಡ ಸಮಾಜ ಸಭಾಂಗಣದಲ್ಲಿ ನಡೆದ ಶಿಬಿರವನ್ನು ಪುರಸಭೆ ಅಧ್ಯಕ್ಷ ಜಯ ವರ್ಧನ್ ಉದ್ಘಾಟಿಸಿದರು.
ಮೈಸೂರಿನ ಸೈಂಟ್ ಜೋಸೆಫ್ ಆಸ್ಪತ್ರೆಯ ವೈದ್ಯರಾದ ಮಹಮ್ಮದ್ ಇಬ್ರಾಹಿಂ, ಮಡಿಕೇರಿ ರಕ್ತ ನಿಧಿ ಘಟಕದ ಡಾ. ಕರುಬಯ್ಯ, ಡಾ ಶಶಿಧರ್ ಮತ್ತು ಸಿಬ್ಬಂದಿಗಳ ನೇತೃತ್ವದಲ್ಲಿ ಶಿಬಿರ ನಡೆಯಿತು. 75ಕ್ಕೂ ಅಧಿಕ ರಕ್ತದಾನಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು. ಲಯನ್ಸ್ ಕ್ಲಬ್ ಅಧ್ಯಕ್ಷರಾದ ಎಂ.ಎಸ್ ಚಿಣ್ಣಪ್ಪ, ಕಾರ್ಯದರ್ಶಿ ಸುಮನ್ ಬಾಲಚಂದ್ರ, ಹೇಮಂತ್, ನಿಕಟ ಪೂರ್ವ ಅಧ್ಯಕ್ಷರುಗಳಾದ ಪಿ ಎಂ ಮೋಹನ್, ರಾಜಶೇಖರ್, ಸತೀಶ್ ಕುಮಾರ್, ಗೌಡ ಸಮಾಜದ ಅಧ್ಯಕ್ಷರಾದ ಗಣಿ ಪ್ರಸಾದ್ ಕಾರ್ಯದರ್ಶಿ ಕೃಷ್ಣಮೂರ್ತಿ, ಯುವಕ ಸಂಘ ಅಧ್ಯಕ್ಷರಾದ ಕೊಡಗನ ಹರ್ಷ,ಕಾಶಿ ಪೂವಯ್ಯ ಮತ್ತಿತರರು ಇದ್ದರು.










