ಮಡಿಕೇರಿ ಮಾ.18 : ವಿಶ್ವ ಹಿಂದೂ ಪರಿಷದ್, ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಅಮ್ಮತ್ತಿ ಘಟಕದ 25ನೇ ವರ್ಷದ ಸತ್ಯನಾರಾಯಣ ಪೂಜೆಯ ಪ್ರಯುಕ್ತ ಮಾ.21 ರಂದು ಹಿಂದೂ ಸಮಾವೇಶ ನಡೆಯಲಿದೆ.
ಸಂಜೆ 5.30 ಗಂಟೆಗೆ ಪಾಲಿಬೆಟ್ಟ ಮಾರುಕಟ್ಟೆಯಿಂದ ಶೋಭಾ ಯಾತ್ರೆ ಹೊರಡಲಿದ್ದು, 6.30 ಗಂಟೆಗೆ ಅಮ್ಮತ್ತಿ ಕೊಡವ ಸಮಾಜದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವ ಹಿಂದೂ ಪರಿಷತ್ ಅಮ್ಮತ್ತಿ ಘಟಕದ ಅಧ್ಯಕ್ಷ ಬಿ.ಜಿ.ಪ್ರಥಮ್ ಕರುಂಬಯ್ಯ ವಹಿಸಲಿದ್ದು, ಪರಿಷದ್‍ನ ವಿರಾಜಪೇಟೆ ಪ್ರಖಂಡ ಬಿ.ಎಂ.ಕುಮಾರ್ ಉಪಸ್ಥಿತರಿರಲಿದ್ದಾರೆ.
ವಿಶ್ವ ಹಿಂದೂ ಪರಿಷದ್‍ನ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯ ರಘು, ಸಕಲೇಶಪುರ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.






