ಮಡಿಕೇರಿ ಮಾ.18 : ಮಹಿಳೆಯರಿಗೆ ಶಿಕ್ಷಣ ಮತ್ತು ಉದ್ಯೋಗ ನೀಡುವ ಮೂಲಕ ಸ್ತ್ರೀ ಸಾಮಾಥ್ರ್ಯವನ್ನು ಹೆಚ್ಚಿಸಲಾಗುತ್ತಿದೆ. ಇಂದು “ದುಡ್ಡೇ ದೊಡ್ಡಪ್ಪ” ಎನ್ನುವ ಕಾಲ ಹೋಗಿ “ದುಡಿಮೆಯೇ ದೊಡ್ಡಪ್ಪ” ಎನ್ನುವ ಕಾಲ ಬಂದಿದೆ. ಎಲ್ಲರಿಗೂ ದುಡಿಮೆ ನೀಡುವ ಯೋಜನೆಯನ್ನು ನಮ್ಮ ಸರ್ಕಾರ ರೂಪಿಸಿದೆ. ದುಡಿಮೆಗೆ ಮಹತ್ವ ನೀಡುವ ನಾಡಿನಲ್ಲಿ ಸ್ವಾವಲಂಬಿ ಬದುಕು ಸಾಗಿಸಲು ಜನರು ಸಮರ್ಥರಾಗಿರುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
ಅಧಿಕಾರದಲ್ಲಿದ್ದಾಗ ಜನರಿಗೆ ಏನನ್ನೂ ನೀಡಲಾಗದವರು ಈಗ ಗ್ಯಾರಂಟಿ ಕಾರ್ಡ್ ನೀಡುತ್ತಿದ್ದಾರೆ. ಇದು ಗ್ಯಾರಂಟಿ ಕಾರ್ಡ್ ಅಲ್ಲ. ಬೋಗಸ್ ಕಾರ್ಡ್, ವಿಸಿಟಿಂಗ್ ಕಾರ್ಡ್. ಇದನ್ನು ಜನ ಕಸದ ಬುಟ್ಟಿಗೆ ಹಾಕುತ್ತಾರೆ. ಎಲ್ಲರನ್ನು ಎಲ್ಲಾ ಸಂದರ್ಭದಲ್ಲಿ ಮೋಸ ಮಾಡಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳಿಗೆ ಯಾರೂ ಮೋಸ ಮಾಡಬಾರದು. ಸ್ವಾಭಿಮಾನಿಗಳಾಗಿ ಬದುಕುವುದನ್ನು ತೋರಿಸಿಕೊಡಬೇಕೆಂದು ಹೇಳಿದರು.









