ವಿರಾಜಪೇಟೆ ಮಾ.18 : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ 2022-23 ನೇ ಸಾಲಿನಲ್ಲಿ ನಡೆಸಿದ ಕಿರಿಯ ದರ್ಜೆಯ ಭರತನಾಟ್ಯ ಪರೀಕ್ಷೆಯಲ್ಲಿ ಸಮೃದ್ಧಿ ಎ.ವಿ ಶೇಕಡ 84.75 ಅಂಕ ಪಡೆದು ಕೊಡಗು ಜಿಲ್ಲೆಗೆ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಇವರು ನೆಲ್ಯಹುದಿಕೇರಿ ನಿವಾಸಿ, ಸಿದ್ದಾಪುರದ ಪತ್ರಕರ್ತ ವಾಸು ಎ.ಎನ್ ಹಾಗೂ ವಿಶಾಲಾಕ್ಷಿ ಎ.ಎ ದಂಪತಿ ಪುತ್ರಿಯಾಗಿದ್ದಾಳೆ. ಸಿದ್ದಾಪುರದ ಭಾರತೀಯ ನೃತ್ಯ ಕಲಾ ಶಾಲೆಯ ವಿದೂಷಿ ಜಲಜಾ ನಾಗರಾಜ ಅವರ ಶಿಷ್ಯೆಯಾಗಿದ್ದು, ನೆಲ್ಯಹುದಿಕೇರಿಯ ಆಂಗ್ಲೋ ವರ್ನಾಕ್ಯುಲರ್ ಪ್ರೌಢ ಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದಾಳೆ.










