ನಾಪೋಕ್ಲು ಮಾ.20 : ನಾಪೋಕ್ಲು ಗ್ರಾ.ಪಂ ವ್ಯಾಪ್ತಿಯ ಬೇತು ಗ್ರಾಮದಲ್ಲಿ ಸರ್ಕಾರದ ಮಳೆ ಪರಿಹಾರ ನಿಧಿ ಯೋಜನೆಯಡಿಯಲ್ಲಿ ನಿರ್ಮಿಸಲಾಗುತ್ತಿರುವ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗ್ರಾ.ಪಂ ಅಧ್ಯಕ್ಷೆ ಎಚ್.ಎಸ್ ಪಾರ್ವತಿ ಚಾಲನೆ ನೀಡಿದರು.
ನಾಪೋಕ್ಲು -ಮಡಿಕೇರಿ ಮುಖ್ಯರಸ್ತೆಯ ತೋಟಗಾರಿಕಾ ಕ್ಷೇತ್ರದದಿಂದ 5.16 ಲಕ್ಷರೂ ವೆಚ್ಚದಲ್ಲಿ ಬೇತು ಗ್ರಾಮಕ್ಕೆ ಸಂಪರ್ಕಕಲ್ಪಿಸುವ ರಸ್ತೆ, ಬೇತಗ್ರಾಮದ ಕೊಂಡೀರ ಕುಟುಂಬಸ್ಥರ ಐನ್ ಮನೆಗೆ 1.88 ಲಕ್ಷದ ಕಾಂಕ್ರೆಟ್ ರಸ್ತೆ ಹಾಗೂ 2.36 ಲಕ್ಷ ರೂ ವೆಚ್ಚದಲ್ಲಿ ಬೇತು ಗ್ರಾಮದಿಂದ ಬಲಮುರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಕ್ಕಿ ಕಡವು ರಸ್ತೆ ಸೇರಿ ಒಟ್ಟು 9.4 ಲಕ್ಷರೂ ವೆಚ್ಚದಲ್ಲಿ ನಿರ್ಮಾಣವಾಗಲಿರುವ ರಸ್ತೆ ಮರುಡಾಂಬರೀಕರಣ ಹಾಗೂ ಕಾಂಕ್ರೆಟ್ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು.
ಗ್ರಾಮಸ್ಥರಾದ ಕೊಂಡೀರ ರಾಜಪ್ಪಮಾತನಾಡಿ, ನಮ್ಮ ಗ್ರಾಮದ ವಿವಿಧ ರಸ್ತೆಕಾಮಗಾರಿಗೆ ಚಾಲನೆ ನೀಡಿರುವುದು ಸಂತಸ ತಂದಿದೆ. ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಿಕೊಡುವಂತೆ ಮನವಿ ಮಾಡಿದರು.
ಈ ಸಂದರ್ಭ ಗ್ರಾ.ಪಂ ಸದಸ್ಯರಾದ ಕಾಳೆಯಂಡ ಸಾಬಾ ತಿಮ್ಮಯ್ಯ, ಕೆ.ಎ.ಇಸ್ಮಾಯಿಲ್, ಮಾಚೇಟ್ಟಿರ ಕುಶು ಕುಶಾಲಪ್ಪ, ಯಶೋಧ, ಶಶಿ ಮಂದಣ್ಣ, ಗ್ರಾಮಸ್ಥರಾದ ಕೊಂಡೀರ ರಾಜಪ್ಪ, ಕುಟ್ಟಂಜೆಟ್ಟೀರ ಶಾಮ್ ಬೋಪಣ್ಣ, ಕೊಂಡೀರ ಸುರೇಶ್, ಚೋಕಿರ ರೋಷನ್, ಕೊಂಡೀರ ನಂದ, ಚೋಕಿರ ಸುಧಿ ಅಪ್ಪಯ್ಯ, ಕೊಂಡೀರ ಮೋಹನ್, ಎಳ್ತಂಡ ಶಾಂತಿ, ದಿನೇಶ್ ಭಟ್, ಕಲಿಯಂಡ ಬೋಪಣ್ಣ, ಮಿಟ್ಟು ಸೋಮಯ್ಯ, ವಸಂತ, ಕಿರಣ, ಮಿಥುನ್, ಗುತ್ತಿಗೆದಾರ ವಿನಾಯಕ ಮತ್ತಿತರರು ಹಾಜರಿದ್ದರು.
ವರದಿ :ಝಕರಿಯ ನಾಪೋಕ್ಲು











