ನಾಪೋಕ್ಲು ಮಾ.20 : ಚೆರಿಯಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆರಂಭಗೊಂಡಿರುವ ಅಪ್ಪಚೆಟ್ಟೋಳಂಡ ಕುಟುಂಬಸ್ಥರು ಸಾರಥ್ಯ ವಹಿಸಿದ್ದ 23ನೇ ಕೊಡವ ಕೌಟುಂಬಿಕ ಹಾಕಿ ನಮ್ಮೆಯ ಪಂದ್ಯಾವಳಿಯ ಮೊದಲ ದಿನ ವಿವಿಧ ತಂಡಗಳು ಸೆಣೆಸಾಟ ನಡೆಸಿದವು.
ಮೂರು ಮೈದಾನಗಳಲ್ಲಿ ನಡೆದ ಪಂದ್ಯಗಳಲ್ಲಿ ಪೆಮ್ಮಡಿಯಂಡ, ಚೊಟ್ಟೆಯಂಡ, ಪುಟ್ಟಿಚಂಡ, ಚೇರಂಡ, ಕಬ್ಬಚ್ಚಿರ, ಅಮ್ಮಂಡ, ಕೊಂಡಿರ ಸೇರಿದಂತೆ ವಿವಿಧ ತಂಡಗಳು ಗೆಲುವು ಸಾಧಿಸಿದವು.
ಮೈದಾನ ಒಂದರಲ್ಲಿ ನಡೆದ ಮೊದಲ ಪಂದ್ಯದಲ್ಲಿ ಪೆಮ್ಮಡಿಯಂಡ ಮತ್ತು ಮಚ್ಚುರ ತಂಡಗಳು ಸೆಣೆಸಾಟ ನಡೆಸಿದವು. ಪೆಮ್ಮಡಿಯಂಡ ತಂಡ ನಾಲ್ಕು ಗೋಲು ಗಳಿಸಿದರೆ ಮಚ್ಚುರತಂಡ ಮೂರು ಗೋಲು ಗಳಿಸಿ ಸೋಲನ್ನನುಭವಿಸಿತು. ಎರಡನೇ ಪಂದ್ಯದಲ್ಲಿ ಕಾಂಡಂಡ ಮತ್ತು ಪುಟ್ಟಿಚಂಡ ತಂಡಗಳು ಸೆಣೆಸಾಡಿದವು ಪುಟ್ಟಿಚಂಡ ತಂಡ ಒಂದು ಗೋಲು ಗಳಿಸಿದರೆ ಕಾಂಡಂಡ ತಂಡ ಯಾವುದೇ ಗೋಲುಗಳಿಸಲಿಲ್ಲ. ಮೂರನೇ ಪಂದ್ಯದಲ್ಲಿ ಚೇರಂಡ ತಂಡ ಎರಡು ಗೋಲು ಗಳಿಸಿದರೆ ಅಲ್ಲಾರಂಡ ತಂಡ ಯಾವುದೇ ಗೋಲು ಗಳಿಸಲು ಶಕ್ತವಾಗಲಿಲ್ಲ.
ಐದನೇ ಪಂದ್ಯದಲ್ಲಿ ಕಬ್ಬಚ್ಚಿರ ತಂಡ ಗೆಲುವು ಸಾಧಿಸಿತು. ಮೇಚಿಯಂಡ ತಂಡದ ವಿರುದ್ದ 2-1 ಅಂತರದ ಗೆಲುವು ಸಾಧಿಸಿತು. ಆರನೇ ಪಂದ್ಯದಲ್ಲಿ ಅಮ್ಮಂಡ ತಂಡಕ್ಕೆ ಗೆಲುವು ಲಭಿಸಿತು. ಅಮ್ಮಂಡ ತಂಡವು ಕೂಪದಿರ ತಂಡದ ವಿರುದ್ಧ 2-1 ಅಂತರದ ಗೆಲುವು ಸಾಧಿಸಿತು. ಏಳನೇ ಪಂದ್ಯದಲ್ಲಿ ಕೊಂಡಿರ ತಂಡ ಎರಡು ಗೋಲುಗಳ ಮುನ್ನಡೆ ಸಾಧಿಸಿತು. ಗಂಡಂಗಡ ತಂಡ ಕೇವಲ ಒಂದು ಗಳಿಸಿತು.
ಎರಡನೇ ಮೈದಾನದಲ್ಲಿ ಚೋಳಂಡ ಮತ್ತು ಕೋಚಮಂಡ ತಂಡಗಳ ನಡುವೆ ಮೊದಲ ಪಂದ್ಯ ನಡೆಯಿತು. ಚೋಳಂಡ ತಂಡ ಒಂದು ಗೋಲು ಗಳಿಸುವುದರೊಂದಿಗೆ ಕೋಚಂಮಡ ತಂಡದ ವಿರುದ್ಧ ಗೆಲವು ಸಾಧಿಸಿತು. ಕೋಚಮಂಡ ತಂಡಕ್ಕೆ ಯಾವುದೇ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಎರಡನೇ ಪಂದ್ಯದಲ್ಲಿ ಮೇವಡ ತಂಡವು ಬೊಳಿಯಾಡಿರ ತಂಡದ ವಿರುದ್ಧ ಗೆಲುವು ಸಾಧಿಸಿತು. ಬೊಳಿಯಾಡಿರ ತಂಡ ಕೇವಲ ಒಂದು ಗೋಲು ಗಳಿಸಲು ಶಕ್ತವಾಯಿತು.
ನಾಲ್ಕನೇ ಪಂದ್ಯದಲ್ಲಿ ಬಳ್ಳಂಡ ಮತ್ತು ಪೊರ್ಕೊಂಡ ತಂಡಗಳು ಸ್ಪರ್ಧೆ ನಡೆಸಿದವು. ಬೊಳ್ಳಂಡ ತಂಡವು 1-0 ಅಂತರದ ಗೆಲುವು ಸಾಧಿಸಿತು. ಮತ್ತೊಂದು ಪಂದ್ಯದಲ್ಲಿ ಬೊಳಕಾರಂಡ ತಂಡಕ್ಕೆ ಎರಡು ಗೋಲು ಲಭಿಸಿದರೆ ಮಚ್ಚಂಡ ತಂಡಕ್ಕೆ ಒಂದು ಗೋಲು ಲಭಿಸಿತು.
ಮೂರನೇ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕೋಣಿಯಂಡ ತಂಡ ಟೈ ಬ್ರೇಕರ್ ನಲ್ಲಿ 3- 2 ಅಂತರದ ಗೆಲುವು ಸಾಧಿಸಿತು.ಪೊರೆಂಗಡ ಮತ್ತು ಕಲ್ಲೆಂಗಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪೊರೆಂಗಡ ತಂಡ 1-0 ಅಂತರದ ಗೆಲುವು ಸಾಧಿಸಿತು. ಮತ್ತೊಂದು ಪಂದ್ಯದಲ್ಲಿ ಕರವಂಡ ತಂಡವು ಮುಕ್ಕಾಟಿರ (ಬೇತ್ರಿ) ತಂಡದ ವಿರುದ್ಧ 3-1 ಅಂತರದಲ್ಲಿ ಮುನ್ನಡೆ ಸಾಧಿಸಿತು. ಮೂರನೇ ಪಂದ್ಯದಲ್ಲಿ ಮುಂಡಚಾಡಿರ ತಂಡವು ಪುಚ್ಚಿಮಂಡ ತಂಡದ ವಿರುದ್ಧ ಗೆಲುವು ಸಾಧಿಸಿತು.ನಾಲ್ಕನೇ ಪಂದ್ಯದಲ್ಲಿ ಆತಿಥೇಯ ಅಪ್ಪಚೆಟ್ಟೋಳಂಡ ತಂಡ ಗೆಲುವು ಸಾಧಿಸಿತು.ಐದನೇ ಪಂದ್ಯದಲ್ಲಿ ಕೇಚೆಟ್ಟಿರ ತಂಡವು ಪಾಸುರ ತಂಡದ ವಿರುದ್ಧ 3-0 ಅಂತರದ ಗೆಲುವು ಸಾಧಿಸಿತು.
ಮಚ್ಚಾರಂಡ ಮತ್ತು ಕಾಟುಮಣಿಯಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮಚ್ಚಾರಂಡ ತಂಡ 3-0 ಅಂತರದಿಂದ ಗೆಲುವು ಸಾಧಿಸಿತು.ಕಾಟುಮಣಿಯಂಡ ತಂಡಕ್ಕೆ ಯಾವುದೇ ಗೋಲು ಗಳಿಸಲು ಸಾಧ್ಯವಾಗಲಿಲ್ಲ.
ಇಂದಿನ ಪಂದ್ಯಗಳು
ಮೈದಾನ-1
8.30 ಗಂಟೆಗೆ ಮುಂಡಂಡ- ನಾಪಂಡ
9:30 ಕ್ಕೆ ಕುಟ್ಟಂಡ ( ಅಮ್ಮತಿ)- ಪೊನ್ನತಂಡ
10.30 ಕ್ಕೆ ವಾಟೆರಿರ- ನಂದಿನೆರವಂಡ
11:30 ಕ್ಕೆ ನಾಗಂಡ- ಕುಪ್ಪಂಡ ( ನಾಂಗಲ)
12:30 ಕ್ಕೆ ಮದ್ರೀರ-ಪಾಲೆಂಗಡ
1:30 ಕ್ಕೆ ತಿರೋಡಿರ-ಮೂಕಂಡ
2.30ಕ್ಕೆ ಬಯವಂಡ-ಅಪ್ಪಾರಂಡ
3:30ಕ್ಕೆ ತಂಬುಕುತ್ತೀರ- ಬಾದುಮಂಡ
ಮೈದಾನ-2
8.30 ಕ್ಕೆ ಕಾಳೆಯಂಡ- ಮೂಡೆರ
9:30ಕ್ಕೆ ಕಾಂಗೀರ- ನಿಡುಮಂಡ
10.30 ಕ್ಕೆ ನಂಬುಡಮಾಡ-ಪುತ್ತರಿರ
11:30ಕ್ಕೆ ೋಡಿಯಂಡ-ಪುಲಿಯಂಡ
12:30ಕ್ಕೆ ಅಯ್ಯನೆರವಂಡ-ಪಟ್ಟಮಾಡ
1.30ಕ್ಕೆ ಐಚಂಡ- ಗೌಡಂಢ
2:30ಕ್ಕೆ ಕಾಟುಮನೀಐಮಢ-ಮಚ್ಚಾರಂಡ
3:30ಕ್ಕೆ ಕಂಜಿತಂಡ-ಚೋಕಂಡ
ಮೈದಾನ-3
8:30ಕ್ಕೆ ಕೈಬುಲಿರ- ಕುಂಚೆಟ್ಟಿರ
9.30 ಕ್ಕೆ ಬಟ್ಟೀರ-ಚೊಟ್ಟೇರ
10:30ಕ್ಕೆ ಕೇತಿರ -ಮಾಣಿಕಂಡ
11:30 ಕ್ಕೆ ಮಾದಂಡ-ಚೆರಿಯಪಂಡ
12:30ಕ್ಕೆ ಅಡ್ಡೇಂಗಡ-ಕೂಡಂಡ
1.30 ಕ್ಕೆ ಅರಮನೆಮಾಡ- ಅಲೆಮಾಡ
2.30 ಕ್ಕೆ ಕೀತಿಯಂಡ- ಅಪ್ಪುಮಣಿಯಂಡ
ವರದಿ : ದುಗ್ಗಳ ಸದಾನಂದ.









