ಸೋಮವಾರಪೇಟೆ ಮಾ.21 : ಹಾಸನದ 2ನೇ ಘಟಕದ ವತಿಯಿಂದ ಸೋಮವಾರಪೇಟೆಯಿಂದ ಹಾಸನ, ಅರಸಿಕೆರೆ ಮಾರ್ಗದ ಮೂಲಕ ಶಿವಮೊಗಕ್ಕೆ ನೂತನ ಬಸ್ ಸಂಚಾರ ಪ್ರಾರಂಭಗೊಂಡಿದೆ.
ಬೆಳಿಗ್ಗೆ 5 ಗಂಟೆಗೆ ಇಲ್ಲಿಂದ ಹೊರಟು, ಅರಕಲಗೂಡು ಮಾರ್ಗದ ಮೂಲಕ 7-15ಕ್ಕೆ ಹಾಸನ, 8-30ಕ್ಕೆ ಅರಸಿಕೆರೆ, 10ಕ್ಕೆ ಭದ್ರಾವತಿ ಹಾಗೂ 11ಕ್ಕೆ ಶಿವಮೊಗಕ್ಕೆ ತಲುಪುವುದು. ನಂತರ ಮಧ್ಯಾಹ್ನ 12-30ಕ್ಕೆ ಶಿವಮೊಗ್ಗದಿಂದ ಹೊರಟು ಅದೇ ಮಾರ್ಗದಲ್ಲಿ ರಾತ್ರಿ 9ಕ್ಕೆ ಸೋಮವಾರಪೇಟೆ ತಲುಪುವುದು ಎಂದು ನಿಯಂತ್ರಣಾಧಿಕಾರಿ ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೈಸೂರಿನ ಗ್ರಾಮಾಂತರ ವಿಭಾಗದ ಕೆ.ಆರ್. ನಗರ ಡಿಪೋದಿಂದ ಸೋಮವಾರಪೇಟೆ ಮೂಲಕ ಬೆಂಗಳೂರಿಗೆ ನೂತನ ಮಾರ್ಗ ಪ್ರಾರಂಭಗೊಂಡಿದೆ. ಮಧ್ಯಾಹ್ನ 12ಕ್ಕೆ ಕೆ.ಆರ್. ನಗರದಿಂದ ಹೊರಟು, 2ಕ್ಕೆ ಮೈಸೂರು, 4.45ಕ್ಕೆ ಕುಶಾಲನಗರ, ಸಂಜೆ 6ಕ್ಕೆ ಸೋಮವಾರಪೇಟೆ, ಅರಕಲಗೂಡು, ಚನ್ನರಾಯಪಟ್ಟಣದ ಮೂಲಕ ರಾತ್ರಿ 11.15ಕ್ಕೆ ಬೆಂಗಳೂರು ತಲುಪುತ್ತದೆ ಎಂದು ನಿಯಂತ್ರಣಾಧಿಕಾರಿ ಪರಮೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









