ಸುಂಟಿಕೊಪ್ಪ, ಮಾ.23 : ಮನೆಯ ಹಿಂಭಾಗದಲ್ಲಿ ಸೇರಿಕೊಂಡಿದ್ದ ನಾಗರ ಹಾವನ್ನು ಉರಗ ತಜ್ಞ ಪ್ರವೀಣ್ ರಕ್ಷಿಸಿದ್ದಾರೆ.
ನಾಕೂರು ಶಿರಂಗಾಲ ಗ್ರಾಮದ ಪೂವಯ್ಯ ಕಾಲೋನಿಯ ನಿವಾಸಿ ಲೀಲಾಶಶಿ ಎಂಬವರ ಮನೆಯ ಹಿಂಭಾಗದಲ್ಲಿ ಹಾವನ್ನು ಕಂಡು ಉರಗ ತಜ್ಞ ಪ್ರವೀಣ್ ಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪ್ರವೀಣ್ 5 ಅಡಿ ಉದ್ದದ ನಾಗರ ಹಾವು ಹಾಗೂ 26 ಮೊಟ್ಟೆಯನ್ನು ಸಂರಕ್ಷಸಿದ್ದಾರೆ.









