ಮಡಿಕೇರಿ ಮಾ.23 : ಕುಶಾಲನಗರ, ಶನಿವಾರಸಂತೆ ಹೋಬಳಿ ಮುಳ್ಳೂರು ಗ್ರಾಮದ ಎಸ್.ದರ್ಶನ್ ಅವರಿಗೆ ಮಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಲಭಿಸಿದೆ. ಪ್ರೊ. ಎಂ ಜಯಶಂಕರ್ ಅವರ ಮಾರ್ಗದರ್ಶನದಲ್ಲಿ ದರ್ಶನ್ ಅವರು ಮಂಡಿಸಿದ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯದಿಂದ ಪಿ ಎಚ್ ಡಿ ಪದವಿ ನೀಡಲಾಗಿದೆ.
ಮಾರ್ಚ್ 15 ರಂದು ನಡೆದ ಮಂಗಳೂರು ವಿಶ್ವವಿದ್ಯಾಲಯದ 41ನೇ ಘಟಿಕೋತ್ಸವದಲ್ಲಿ ಪದವಿ ಪ್ರಧಾನ ಮಾಡಲಾಯಿತು.
ದರ್ಶನ್ ಅವರು ಮುಳ್ಳೂರು ಗ್ರಾಮದ ಕೆ.ವಿ ಜಾತು ಮತ್ತು ದಿ.ತಂಗಮ್ಮ ಅವರ ಸೊಸೆಯಾಗಿದ್ದು ಕುಶಾಲನಗರ ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕರಾದ ಎಂ ಸಿ ಉದಯಕುಮಾರ್ ಅವರ ಪತ್ನಿಯಾಗಿದ್ದಾರೆ.











