ಮಡಿಕೇರಿ ಮಾ.24 : ವಾಂಡರರ‍್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಮಾ.27 ರಿಂದ ಮೇ 1ರ ವರೆಗೆ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ (ಮ್ಯಾನ್ಸ್ ಕಾಂಪೌಂಡ್) ದಲ್ಲಿ 29ನೇ ವರ್ಷದ ಶಂಕರ್ ಸ್ವಾಮಿ ಉಚಿತ ಕ್ರೀಡಾ ಶಿಬಿರ ನಡೆಯಲಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ವ್ಯಾಂಡರರ‍್ಸ್ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಕೋಟೇರ ಎಂ.ಮುದ್ದಯ್ಯ, ಈ ಬೇಸಿಗೆ ಶಿಬಿರದಲ್ಲಿ 6 ರಿಂದ 16 ವರ್ಷದೊಳಗಿನ ಮಕ್ಕಳು ಭಾಗವಹಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ನುರಿತ ತರಬೇತುದಾರರಿಂದ ಪ್ರಾಣಾಯಾಮ, ಹಾಕಿ, ಅಥ್ಲೆಟಿಕ್ಸ್ ತರಬೇತಿ ನೀಡಲಾಗುವುದು. ಪ್ರತಿ ದಿನ ಬೆಳಿಗ್ಗೆ 6.30 ರಿಂದ 8.30 ಗಂಟೆಯವರೆಗೆ ಶಿಬಿರ ನಡೆಯಲಿದ್ದು, ವಿದ್ಯಾರ್ಥಿಗಳಿಗೆ ಲಘು ಉಪಹಾರ ನೀಡಲಾಗುತ್ತದೆ.
ಪ್ರಾಣಾಯಾಮ ತರಬೇತಿಯಲ್ಲಿ ಆಸಕ್ತ ಪೋಷಕರು ಹಾಗೂ ಸಾರ್ವಜನಿಕರು ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಬಾಬು ಸೋಮಯ್ಯ 9448895950 ಹಾಗೂ ಎಸ್‌ಟಿ.ವೆಂಕಟೇಶ್- 9448873999 ಅವರುಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಹೇಳಿದ್ದಾರೆ.














