ಮಡಿಕೇರಿ ಮಾ.26 : ವಿಧಾನಸಭಾ ಚುನಾವಣೆ ಹಿನ್ನೆಲೆ ಆಮ್ ಆದ್ಮಿ ಪಾರ್ಟಿ ಜನರಿಂದ ಜನರಿಗಾಗಿ ಪ್ರಣಾಳಿಕೆ ಸಿದ್ಧ ಪಡಿಸಲಿದ್ದು, ಜನರು ಸಲಹೆ ಸೂಚನೆಗಳನ್ನು ನೀಡಬಹುದೆಂದು ಪಕ್ಷದ ಜಿಲ್ಲಾಧ್ಯಕ್ಷ ಭೋಜಣ್ಣ ಸೋಮಯ್ಯ ತಿಳಿಸಿದ್ದಾರೆ.
ಮಾ.29 ರಂದು ಬೆಳಗ್ಗೆ 10 ಗಂಟೆಗೆ ಪೊನ್ನಂಪೇಟೆ ಐಬಿ ಸಭಾಂಗಣದಲ್ಲಿ ಪ್ರಣಾಳಿಕೆ ಸಭೆ ನಡೆಯಲಿದ್ದು, ಪಕ್ಷದ ಕಾರ್ಯಕರ್ತರಿಗೆ ಹಾಗೂ ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ ಎಂದು ಹೇಳಿದ್ದಾರೆ. ಕೊಡಗಿನ ಜ್ವಲಂತ ಸಮಸ್ಯೆಗಳು ಹಾಗೂ ಜನರ ಬೇಡಿಕೆಗಳಿಗೆ ಪ್ರಣಾಳಿಕೆ ಸ್ಪಂದಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಆಸಕ್ತರು Http://bit.ly/JanaraPranalike ಲಿಂಕನ್ನು ಸಂಪರ್ಕಿಸಬಹುದಾಗಿದೆ.










