ಮಡಿಕೇರಿ ಮಾ.28 : ವಿವಾಹಿತೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಡಿಕೇರಿ ನಗರದ ಹೊಸ ಬಡವಾಣೆಯಲ್ಲಿ ನಡೆದಿದೆ.
ರವೀಂದ್ರ ಎಂಬುವವರ ಪುತ್ರಿ ಭೂಮಿಕಾ(28) ಮೃತ ಮಹಿಳೆ. ಎರಡು ವರ್ಷಗಳ ಹಿಂದೆಯಷ್ಟೇ ವಿವಾಹವಾಗಿದ್ದ ಇವರಿಗೆ 11 ತಿಂಗಳ ಹೆಣ್ಣು ಮಗುವಿದೆ. ಮೃತರು ಪತಿ ಹಾಗೂ ಮಗುವನ್ನು ಅಗಲಿದ್ದಾರೆ. ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










