ಮಡಿಕೇರಿ ಮಾ.28 : ನಾನು ಶಾಸಕನಾಗಿ ಗೆದ್ದು ಬಂದರೆ ಕೊಡಗು ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸ್ಥಾಪನೆಗೆ ಅವಿರತ ಶ್ರಮ ಪಡುವುದಾಗಿ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಎಸ್.ಪೊನ್ನಣ್ಣ ಭರವಸೆ ನೀಡಿದ್ದಾರೆ.
ಕ್ಯಾಂಪ್ ನಿಶಾನಿ ಸಭಾಂಗಣದಲ್ಲಿ ನಡೆದ ಭಾಗಮಂಡಲ ವಲಯ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಭ್ರಷ್ಟಾಚಾರ ಮುಕ್ತ ಆಡಳಿತ ತಮ್ಮ ಮೊದಲ ಆದ್ಯತೆ ಎಂದರು.
ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತರುವುದು ನನ್ನ ಗುರಿಯಾಗಿದೆ. ಎಲ್ಲಾ ರಸ್ತೆಗಳ ಅಭಿವೃದ್ಧಿ, ಪ್ರತಿಯೊಂದು ಕುಟುಂಬಕ್ಕೂ ಕುಡಿಯುವ ನೀರು, ಬಡ ಕುಟುಂಬಗಳಿಗೆ ನಿವೇಶನ, ಊರಿನ ಆಟದ ಮೈದಾನಗಳು ಮತ್ತು ಕ್ರೀಡಾಂಗಣಗಳ ಅಭಿವೃದ್ಧಿ, ಸರ್ಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ, ಭ್ರಷ್ಟಾಚಾರದ ನಿರ್ಮೂಲನೆಗೆ ಕ್ರಮ, ವನ್ಯಜೀವಿ- ಮಾನವ ಸಂಘರ್ಷ ತಡೆಗೆ ಪರಿಹಾರ ಸೇರಿದಂತೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.
ಭಾಗಮಂಡಲ ವಲಯ ಕಾಂಗ್ರೆಸ್ ಅಧ್ಯಕ್ಷ ದೇವಂಗೋಡಿ ಹರ್ಷ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಪ್ರಚಾರ ಸಮಿತಿ ಅಧ್ಯಕ್ಷ ಟಿ.ಪಿ.ರಮೇಶ್, ಕೆಪಿಸಿಸಿ ಸದಸ್ಯ ಬೇಕಲ್ ರಮಾನಾಥ್ ಮಾತನಾಡಿದರು.
::: ಕಾಂಗ್ರೆಸ್ ಗೆ ಸೇರ್ಪಡೆ :::
ಭಾಗಮಂಡಲ ತಾವೂರಿನ ಹಿರಿಯ ಮುಖಂಡ ಕೋಳಿಬೈಲು ವೆಂಕಟೇಶ್, ಮೂಲೆಮಜಲು ಚರಣ್, ಕುಂಬನ ಹರೀಶ್ ದಂಪತಿ, ಎಂ.ರೇಣು, ಶಿರಕಜೆ ವೇದಾವತಿ, ದೇವಂಗೋಡಿ ಪೊನ್ನಪ್ಪ, ಕುದುಕುಳಿ ತಾರಾನಾಥ್, ಕೋಳಿಕಾಡು ಕುಮಾರ್ ಹಾಗೂ ಇತರ ಪಕ್ಷಗಳ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಬಾನಂಡ ಪ್ರಥ್ಯು, ಬ್ಲಾಕ್ ಅಧ್ಯಕ್ಷ ಇಸ್ಮಾಯಿಲ್, ಜಿಲ್ಲಾ ವಕ್ತಾರ ಟಾಟು ಮೊಣ್ಣಪ್ಪ, ಬೊಳ್ಳಂಡ ಗಿರೀಶ್ (ಶರಿ), ವಿರಾಜಪೇಟೆ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷ ಕೊಲ್ಯದ ಗಿರೀಶ್, ಹೆಚ್.ಕೆ.ರಾಜು, ಅಯ್ಯಂಗೇರಿ, ಸಣ್ಣಪುಲಿಕೋಟು ಮತ್ತು ಚೆಟ್ಟಿಮಾನಿಯ ಪಕ್ಷದ ಹಿರಿಯ ಮುಖಂಡರುಗಳು, ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯ ಸುನಿಲ್ ಪತ್ರಾವೋ ಸ್ವಾಗತಿಸಿ, ಪ್ರಮುಖರಾದ ಶರತ್ ವಂದಿಸಿದರು.









