ನಾಪೋಕ್ಲು ಮಾ.29 : ಸಾವಿರಾರು ವರ್ಷಗಳ ದಾಳಿಯ ನಂತರವೂ ಹಿಂದೂ ಧರ್ಮ ಉಳಿದಿರುವುದು ಒಬ್ಬೊಬ್ಬ ಮಹಾಪುರುಷನ ಆದರ್ಶದಿಂದಾಗಿ. ಆ ಆದರ್ಶ ಸಾಮಾನ್ಯ ಹಿಂದುವಿನ ಹೃದಯದಲ್ಲಿ ಹುಟ್ಟಿ ಬರುತ್ತಿರುವುದರಿಂದ ಸಮಾಜ ಗಟ್ಟಿಯಾಗಿದೆ ಎಂದು ವಾಗ್ಮಿ ಚೈತ್ರ ಕುಂದಾಪುರ ಹೇಳಿದರು. ಯುಗಾದಿ ಪ್ರಯುಕ್ತ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ವತಿಯಿಂದ ಆಯೋಜಿಸಲಾಗಿದ್ದ ಹಿಂದೂ ಚಾಂಪಿಯನ್ ಟ್ರೋಫಿ ಕ್ರಿಕೆಟ್ ಮತ್ತು ಹಗ್ಗ ಜಗ್ಗಾಟ ಕ್ರೀಡಾಕೂಟದ ಸಮಾರೋಪ ಸಮಾರಂಭ ಉದ್ಘಾಟಿಸಿ ದಿಕ್ಸೂಚಿ ಭಾಷಣ ಮಾಡಿದ ಅವರು
ಬಜರಂಗದಳದ ಸಂಘಟನೆ ಎಂದರೆ ಬದುಕಿನ ಉಸಿರು. ಬಜರಂಗದಳದ ಕಾರ್ಯಕರ್ತರು ಧರ್ಮ ರಕ್ಷಣೆಗಾಗಿ ಪ್ರಾಣ ಕೊಡುವ ಬದ್ದತೆಯನ್ನು ಹೊಂದಿರುತ್ತಾರೆ ತೋರಿಕೆಗಾಗಿ, ನಾಯಕ ಎನಿಸಿಕೊಳ್ಳುವುದಕ್ಕಾಗಿ, ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕಾಗಿ ಅವರು ಕಾರ್ಯಕರ್ತರಾಗುವುದಿಲ್ಲ ಬಜರಂಗದಳಕ್ಕೆ ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ದೇಶ ಪ್ರೇಮಿಯನಾಗಿಸುವ ಬದ್ಧತೆ ಇರುತ್ತದೆ ಎಂದರು.
ಈ ಸಂದರ್ಭ ವೇದಿಕೆಯಲ್ಲಿ ಕೊಡಗು ಜಿಲ್ಲಾ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಕೃಷ್ಣಮೂರ್ತಿ, ಕಾರ್ಯದರ್ಶಿ ಪುದಿಯೊಕ್ಕಡ ರಮೇಶ್, ಮುಖಂಡ ಕಲಿಯಂಡ ವಿಠಲ, ಜಗದೀಶ್ ರೈ, ಸಂಪರ್ಕ ಪ್ರಮುಖ್ ಅಜಿತ್, ಬಜರಂಗದಳ ಸಂಚಾಲಕ ಅನೀಶ್, ವಕೀಲರಾದ ಬೊಳ್ಳಾರಂಡ ಕಂಠಿ ಕಾರ್ಯಪ್ಪ, ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ,ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ಅರೆಯಡ ನಂದಾ ನಂಜಪ್ಪ, ವಿಶ್ವ ಹಿಂದೂ ಪರಿಷತ್ ಸಂಚಾಲಕ ನಾಟೋಳಂದ ಸಚಿನ್ ,ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸುಶೀಲಮ್ಮ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಜರಂಗದಳದ ಸಂಚಾಲಕ ರಾಧಾಕೃಷ್ಣ ರೈ ವಹಿಸಿದ್ದರು.
ಚಸ್ಮಿತ ಪ್ರಾರ್ಥನೆಯಿಂದ ಕಾರ್ಯಕ್ರಮದಲ್ಲಿ ಹರ್ಷಿತಾ ಶೆಟ್ಟಿ, ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ ವಂದಿಸಿದರು.
ಯುಗಾದಿ ಪ್ರಯುಕ್ತ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ವತಿಯಿಂದ ಆಯೋಜಿಸಲಾಗಿದ್ದ ಹಿಂದೂ ಚಾಂಪಿಯನ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಟೀಮ್ ಮ್ಯಾಕ್ಸ್ ವೆಲ್ ಕೊಡಗು ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ಶಿವಾಜಿ ಕ್ರಿಕೆಟರ್ಸ್ ಬೊಳ್ಳುಮಾಡು ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಮದೆನಾಡಿನ ಕಾಫಿ ಲಿಂಕ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿತು. ನೆಲಜಿ ಫಾರ್ಮರ್ಸ್ ಕ್ಲಬ್ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಫೈನಲ್ ಮ್ಯಾನ್ ಆಫ್ ದ ಸೀರೀಸ್- ರಾಕೇಶ್ ಚೋಟು ಟೀಂ ಮ್ಯಾಕ್ಸ್ ವೆಲ್ ತಂಡ
ಬೆಸ್ಟ್ ಬ್ಯಾಟ್ಸ್ ಮನ್ ಸತ್ಯ ಟೀಂ ಶಿವಾಜಿ ಕ್ರಿಕೆಟರ್ಸ್ ಬೊಳ್ಳುಮಾಡು, ಬೆಸ್ಟ್ ಬೌಲರ್ ನಂಜಪ್ಪ- ಟೀಮ್ ಮ್ಯಾಕ್ಸ್ ವೆಲ್ ಕೊಡಗು ಮ್ಯಾನ್ ಆಫ್ ದ ಸೀರೀಸ್- ರಾಕೇಶ್ ಚೋಟು ಟೀಂ ಮ್ಯಾಕ್ಸ್ ವೆಲ್ ಪಡೆದುಕೊಂಡರು.
ವೇದಿಕೆಯಲ್ಲಿದ್ದ ಗಣ್ಯರು ವಿಜೇತರಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು. ಇದಕ್ಕೂ ಮೊದಲು ಶಾಸಕ ಕೆ.ಜಿ.ಬೋಪಯ್ಯ ಹಗ್ಗ ಜಗ್ಗಾಟ ಅಂತಿಮ ಕ್ರೀಡಾಕೂಟವನ್ನು ಉದ್ಘಾಟಿಸಿ ಶುಭಕೋರಿದರು. (ವರದಿ : ದುಗ್ಗಳ ಸದಾನಂದ)
Breaking News
- *ದಕ್ಷಿಣ ಕೊಡಗಿನಲ್ಲಿ ಸಣ್ಣ ಕೈಗಾರಿಕಾ ಪ್ರದೇಶಾಭಿವೃದ್ಧಿ : 50 ಏಕರೆ ಭೂಮಿ ಮಂಜೂರಾತಿಗೆ ಆಪ್ ಮನವಿ*
- *ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜು : 8ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ*
- *ರಾಷ್ಟ್ರೀಯ ಜೂನಿಯರ್ ಹಾಕಿ ತಂಡಕ್ಕೆ ಕೊಡಗಿನ ವಿಶ್ವಜಿತ್ ಹಾಗೂ ಪೂಜಿತ್ ಆಯ್ಕೆ*
- *ರಾಷ್ಟ್ರೀಯ ಜೂನಿಯರ್ ಹಾಕಿ ತಂಡಕ್ಕೆ ದೃಶ್ಯ ಅಚ್ಚಪ್ಪ ಆಯ್ಕೆ*
- *ಹೆಬ್ಬಾಲೆ : ಜ.23 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*
- *ಶ್ರೀ ರಾಮ ಜನ್ಮಭೂಮಿ ಸೇವಾ ಸಮಿತಿಯಿಂದ ಮಡಿಕೇರಿಯಲ್ಲಿ ಅನ್ನದಾನ*
- *ಜ.26 ರಂದು ಲೋಕಾಪ೯ಣೆಯಾಗಲಿದೆ ಮತ್ತೆ ವಸಂತ*
- *ಹೆಗ್ಗಳ ಗ್ರಾಮದ ಸರ್ಕಾರಿ ಶಾಲೆಗೆ ಕಂಪ್ಯೂಟರ್ ಕೊಡುಗೆ*
- *ಎನ್.ಯು.ನಾಚಪ್ಪ ವಿರುದ್ಧ ಪ್ರಕರಣ : ಮಡಿಕೇರಿ ಕೊಡವ ಸಮಾಜ ಖಂಡನೆ*
- *ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿಗೆ ಪಿ.ಹೆಚ್.ಡಿ ಪದವಿ*