ಮಡಿಕೇರಿ ಮಾ.30 : ಕುಲಶೇಖರದಲ್ಲಿರುವ ಶ್ರೀ ವೀರನಾರಾಯಣ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿ ನಡೆಯುತ್ತಿದ್ದು, ಬ್ರಹ್ಮಕಲಶೋತ್ಸವಕ್ಕೆ ಸಿದ್ದತೆ ನಡೆಯುತ್ತಿದೆ. ಆ ಪ್ರಯುಕ್ತ ಪ್ರತೀ ಭಾನುವಾರ ಬೇರೆ ಬೇರೆ ಊರಿನ ಸಂಘಸಂಸ್ಥೆಯಿಂದ ಶ್ರಮದಾನ ನಡೆಯುತ್ತಿದೆ.
ಅದರಂತೆ ಮಡಿಕೇರಿಯ ಕುಲಾಲ/ಕುಂಬಾರ ಯುವ ಘಟಕ, ಅರಸಿನಮಕ್ಕಿ ಕುಲಾಲ ಸಂಘ, ಮಳಲಿ ಕುಲಾಲ ಸಂಘ, ಪೊಳಲಿ ಕುಲಾಲ ಸಂಘ, ಕುರ್ತ್ತಾ ಕುಲಾಲ ಸಂಘಗಳಿಂದ ಶ್ರಮದಾನ ನಡೆಯಿತು.
ಶ್ರಮದಾನದ ಬಳಿಕ ನಡೆದ ಸಭೆಯಲ್ಲಿ ದ.ಕ.ಜಿಲ್ಲಾ ಮೂಲ್ಯರ ಯಾನೆ ಕುಲಾಲ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್ ಮಾತನಾಡಿ, ಸಮುದಾಯದ ಕಷ್ಟ ಸುಖಗಳನ್ನು ಹಂಚಿಕೊಂಡು, ಅನಿಷ್ಠ ಪದ್ಧತಿಗಳ ವಿರುದ್ಧ ಜನಜಾಗೃತಿ, ಬಡವರಿಗೆ ಸಾಮೂಹಿಕ ವಿವಾಹದ ಮುಖಾಂತರ ಸಹಾಯ ನೀಡುವುದು, ವಿದ್ಯಾರ್ಥಿ ಗಳ ವಿದ್ಯಾಭ್ಯಾಸಕ್ಕೆ ಮಾರ್ಗದರ್ಶನ, ವಿದ್ಯಾರ್ಥಿ ನಿಲಯ ಸ್ಥಾಪಿಸುವುದು ಇತ್ಯಾದಿ ಸಮಾಜಮುಖಿ ಕಾರ್ಯಕ್ರಮಗಳನ್ನು ಶ್ರೀ ವೀರನಾರಾಯಣ ದೇವಸ್ಥಾನ ಅಣಿಗೊಳ್ಳಲಿದೆ ಎಂದರು.
ಪ್ರಪಂಚದ ಮೂಲ್ಯ, ಕುಲಾಲ್ರನ್ನು ಒಗ್ಗೂಡಿಸಿ ಶ್ರೀ ವೀರನಾರಾಯಣ ದೇವರ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದರು.
ಸಮಿತಿ ಸದಸ್ಯ ಸುಂದರ ಕುಲಾಲ್ ಶ್ರಮದಾನ ಕ್ಕೆ ಬಂದಂತಹ ಸಂಘದ ಸದಸ್ಯರಿಗೆ ಸ್ವಾಗತಿಸಿ ಹಿರಿಯರನ್ನು ನೆನಪಿಸಿ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ನಡೆದು ಬಂದ ಶ್ರಮದಾನದ ಮಾಹಿತಿ ನೀಡಿದರು.
ಮಡಿಕೇರಿ ಯುವ ಕುಲಾಲ/ಕುಂಬಾರ ಘಟಕದ ಅಧ್ಯಕ್ಷ ಚಂದ್ರಶೇಖರ ಮೂರ್ನಾಡು ಮಾತನಾಡಿ,
ಮಡಿಕೇರಿಯಿಂದ ಬಂದು ಮಂಗಳೂರಿನ ಶ್ರೀ ವೀರನಾರಾಯಣ ಕ್ಷೇತ್ರದಲ್ಲಿ ಶ್ರಮದಾನ ಮಾಡಿರುವುದು ಜೀವನದ ಸಾರ್ಥಕ ಕ್ಷಣಗಳು ಎಂದರು. ಇನ್ನು ಮುಂದೆಯು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಶ್ರಮದಾನ ನೀಡುವೆವು ಎಂದರು.
ಅರಸಿನಮಕ್ಕಿ ಕುಲಾಲ ಸಂಘದ ಗಂಗಾಧರ ಕೂಡ ಶ್ರಮದಾನ ಅನುಭವ ಹಂಚಿಕೊಂಡರು. ಹಿರಿಯರಾದ ಕೃಷ್ಣ, ಶ್ರೀ ವೀರನಾರಾಯಣ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಗಿರಿಧರ್, ಅರಸಿನಮಕ್ಕಿಯ ಕೃಷ್ಣಪ್ಪ, ರಮೇಶ್ ಕುಲಾಲ್ ಪೊಳಲಿ, ಕಿರ್ಶೋ ಕುರ್ಮಾ ಕುರ್ತ್ತಾ, ಮಡಿಕೇರಿ ಸುರೇಶ್ ಕುಲಾಲ್ ಇನ್ನೀತರ ಸಮಾಜ ಭಾಂದವರು ಶ್ರಮದಾನದಲ್ಲಿ ಭಾಗವಹಿಸಿದರು. ಪ್ರವೀಣ್ ಬಸ್ತಿ ಸರ್ವರನ್ನು ವಂದಿಸಿದರು.