ಮಡಿಕೇರಿ ಮಾ.31 : ಹಾಲೇರಿ ನಾಡಿನ ಕಡಂದಾಳು, ಕಾಂಡನಕೊಲ್ಲಿ, ಕೊಪ್ಪತ್ತೂರು, ಹಾಲೇರಿ ಹಾಗೂ ಹೆಮ್ಮತ್ತಾಳು ಗ್ರಾಮಸ್ಥರು ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಸಿಕೊಂಡು ಬರುವ ಹಾಲೇರಿ ಶ್ರೀ ಭದ್ರಕಾಳೇಶ್ವರಿ ದೇವಿಯ ಉತ್ಸವು ಅಂಗವಾಗಿ ಏ.1 ರಿಂದ ಇರ್‌ಬೊಳಕ್ ಕೊಂಬಾಟ್ ನಡೆಯಲಿದೆ.
ಏ.1 ರಂದು ಮಧ್ಯಾಹ್ನ 2.30 ಗಂಟೆಗೆ ಕಾಳೆ ಓಡಿಸುವುದು, ಏ.2 ರಂದು ಹಾಲೇರಿ ಶ್ರೀ ಭದ್ರಕಾಳೇಶ್ವರಿ ದೇವಿಯ ದೊಡ್ಡ ಹಬ್ಬ ನಡೆಯಲಿದ್ದು, ಬೆಳಿಗ್ಗೆ 10 ಗಂಟೆಗೆ ಆಂಗೋಲದೊಂದಿಗೆ ನಾಡುಹತ್ತುವುದರಿಂದ ಪ್ರಾರಂಭಗೊಂಡು ಬೆಳಿಗ್ಗೆ 11.30ಕ್ಕೆ ಕೊಂಬಾಟ್, ಎತ್ತಾಟ್, ಬಿಲ್ಲಾಟ್ ಕುಣಿತಗಳು ಜರುಗಲಿದೆ. ನಂತರ ಅನ್ನಸಂತರ್ಪಣೆ ನಡೆಯಲಿದೆ.
ಮಧ್ಯಾಹ್ನ 1.30 ಗಂಟೆಗೆ ಭಂಡಾರ ಹಾಕುವುದು, ನಂತರ ಬೊಳಕಾಟ್ ದೇವರು ಹೊರಗೆ ಬರುವುದು, ಬಾಳೆಸೊರೆ ಎಸೆಯುವುದು, ಕಾಯಿಗೆ ಗುಂಡು ಹೊಡೆಯುವುದು, ಕಾಳೆ ಸುತ್ತು ಬರಲಿದೆ.
ಏ.3 ರಂದು ಮಧ್ಯಾಹ್ನ 2 ಗಂಟೆಗೆ ಪ್ರಾರಂಭಗೊಂಡು ಮೂರು ತರಹದ ಕುಣಿತ ನೆರವೇರಲಿದೆ. ನಂತರ ಭಂಡಾರ ಹಾಕುವುದು, ಬಾಳೆಸೂರೆ, ಕೊಂಬು ಒಪ್ಪಿಸುವುದು ಇತ್ಯಾದಿ ಕಾರ್ಯಕ್ರಮಗಳು ಜರುಗಲಿದೆ.
ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ದೇವಾಲಯದ ತಕ್ಕಮುಖ್ಯಸ್ಥರು, ಆಡಳಿತ ಮಂಡಳಿ ಅಧ್ಯಕ್ಷರು ಮನವಿ ಮಾಡಿದ್ದಾರೆ.







