ಮಡಿಕೇರಿ ಮಾ.31 : ಮಡಿಕೇರಿಯ ಅಶ್ವಿನಿ ಆಸ್ಪತ್ರೆಯ ಸ್ಥಾಪಕ ಸದಸ್ಯ ಹಾಗೂ ಅಶ್ವಿನಿ ಆಸ್ಪತ್ರೆಯ ನಿರ್ಮಾಣಕ್ಕೆ ಪ್ರಮುಖ ರೂವಾರಿಯಾಗಿದ್ದ ದಿ.ಬೇ.ಸು. ಶೇಷಾದ್ರಿಯವರು ಇತ್ತೀಚೆಗೆ ದೈವಾಧೀನಾರಾದ್ದರು. ಅವರ ಒಡನಾಡಿಗಳು, ಸಹಕಾರಿಗಳು ಮತ್ತು ಅಶ್ವಿನಿ ಆಸ್ಪತ್ರೆಯ ಶ್ರೇಯೋಭಿವೃದ್ಧಿಗೆ ಕೈ ಜೋಡಿಸಿದ ಮಿತ್ರರೆಲ್ಲರೂ ಸೇರಿ ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಇಂದು ಶಾಂತಿ ಪೂಜೆ ನಡೆಸಿದರು.
ನಂತರ ನಡೆದ ಸಂತಾಪ ಸೂಚಕ ಸಭೆಯಲ್ಲಿ ನೆಲ್ಲಮಕ್ಕಡ ಶಂಭು, ಮಚ್ಚಾರಂಡ ಮಣಿ ಕಾರ್ಯಪ್ಪ, ಮಂಡೀರ ದೇವಿ ಪೂಣಚ್ಚ, ಡಿ.ಹೆಚ್. ತಮ್ಮಪ್ಪ, ಡಿ. ನರಸಿಂಹ, ಟಿ.ಕೆ. ತಿಮ್ಮಪ್ಪ ಮಾತನಾಡಿ ದಿ. ಶೇಷಾದ್ರಿಯವರೊಂದಿಗಿನ ಒಡನಾಟ ಮತ್ತು ಅವರು ಅಶ್ವಿನಿ ಆಸ್ಪತ್ರೆಗೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು. ನಂತರ ಶಾಂತಿ ಮಂತ್ರ ಪಠಣದೊಂದಿಗೆ ಸಂತಾಪ ಸೂಚಕ ಸಭೆ ಮುಕ್ತಾಯವಾಯಿತು.