ವಿರಾಜಪೇಟೆ ಮಾ.31 : ಬೆಳ್ಳುಮಾಡು ಆಡುಕೋಣಿ ಶಾಸ್ತಾವು ಈಶ್ವರ ವಿಷ್ಣುಮೂರ್ತಿ ದೇವಸ್ಥಾನ ಜೀರ್ಣೋದ್ಧಾರಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಿಂದ ರೂ. 2 ಲಕ್ಷ ಆರ್ಥಿಕ ನೆರವು ನೀಡಲಾಗಿದೆ.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕರಾದ ಲೀಲಾವತಿ ಅವರು ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಚಂಗುಲಂಡ ಪಿ ಬಿದ್ದಪ್ಪ ಅವರ ಬಳಿ ಮಂಜೂರಾದ 2 ಲಕ್ಷ ರೂ. ಗಳ ಡಿಡಿಯನ್ನು ಹಸ್ತಾಂತರ ಮಾಡಿದರು.
ಈ ಸಂದರ್ಭ ತಾಲೂಕು ಯೋಜನಾಧಿಕಾರಿ ದಿನೇಶ್, ಮೇಲ್ವಿಚಾರಕ ನಾಗರಾಜ್ ಸೇವಾಪ್ರತಿನಿಧಿ ತೇಜಸ್ವಿನಿ, ಒಕ್ಕೂಟದ ಅಧ್ಯಕ್ಷೆ ಜಮುನಾ, ದೇವಸ್ಥಾನ ಅಭಿವೃದ್ದಿ ಸಮಿತಿಯ ಪದಾಧಿಕಾರಿಗಳಾದ ಪಟ್ಟಂಡ ಕಾವೇರಪ್ಪ, ಪಟ್ಟಂಡ ಅರುಣ, ಮಾತಂಡ ಮಧು, ಎಂ.ದಿನೇಶ್ ಮಾತಂಡ ದೇವಯ್ಯ ಕುಯ್ಮಂಡ ಉತ್ತಯ್ಯ, ಮಾತಂಡ ಕಾಳಪ್ಪ, ಪದಾಧಿಕಾರಿಗಳು, ಹಾಗೂ ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.












