ವಿರಾಜಪೇಟೆ ಮಾ.31 : ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ವಿರಾಜಪೇಟೆ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಿರಾಜಪೇಟೆ ತಾಲ್ಲೂಕಿನ ಇಂಜಿಲಗೆರೆ ಗ್ರಾಮದ ಕಲ್ಲುಕೊರೆ ನಿವಾಸಿ ಪ್ರವೀಣ (31) ಹಾಗೂ ವಿರಾಜಪೇಟೆ ಗಾಂಧಿ ನಗರದ ನಿವಾಸಿ ಇಮ್ರಾನ್ ಸೋನು (22) ಬಂಧಿತ ಆರೋಪಿಗಳು.
ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಸಮೀಪ ಸಂಶಯಾಸ್ಪದ ರೀತಿಯಲ್ಲಿ ಓಡಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದರು. ಇವರ ಬಳಿ 1.22 ಕೆ.ಜಿ ಗಾಂಜಾ ಹಾಗೂ 770 ರೂ. ನಗದು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಹೆಚ್ಚುವರಿ ವರಿಷ್ಠಾಧಿಕಾರಿ ಸುಂದರ್ ರಾಜ್ ಹಾಗೂ ವಿರಾಜಪೇಟೆ ಉಪ ವಿಭಾಗದ ಡಿ.ವೈಎಸ್ಪಿ ಮೋಹನ್ ಕುಮಾರ್ ಅವರುಗಳ ಮಾರ್ಗದರ್ಶನದಲ್ಲಿ ವಿರಾಜಪೇಟೆ ನಗರ ವೃತ ನಿರೀಕ್ಷಕ ಅವರ ಶಿವರುದ್ರ ನಿರ್ದೇಶನದ ಮೇರೆಗೆ ವಿರಾಜಪೇಟೆ ನಗರ ಠಾಣೆಯ ಠಾಣಾಧಿಕಾರಿ ಮದನ್ ಕುಮಾರ್ ಎ.ಎಸ್.ಐ. ಮೊಹಮ್ಮದ್ ಎಂ.ಎo. ಸಿಬ್ಬಂದಿಗಳಾದ ಗಿರೀಶ್, ಮಲ್ಲಿಕಾರ್ಜುನ, ಧರ್ಮ ಹಾಗೂ ಸತೀಶ್ ಅವರು ಕಾರ್ಯಾಚರಣೆ ನಡೆಸಿದರು. (ವರದಿ : ಟಿ.ಜೆ.ಕಿಶೋರ್ ಕುಮಾರ್ ಶೆಟ್ಟಿ)









