ಮಡಿಕೇರಿ ಏ.1 : ನಾಪೋಕ್ಲು ರಾಮ ಮಂದಿರದಲ್ಲಿ ರಾಮ ನವಮಿ ಪ್ರಯುಕ್ತ ಶೌರ್ಯ ವಿಪತ್ತು ತಂಡದ ವತಿಯಿಂದ ದೇವಾಲಯದಲ್ಲಿ ಸ್ವಚ್ಛತಾ ಶ್ರಮದಾನ ನಡೆಯಿತು.
ದೇವಾಲಯದ ಆವರಣದಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ಕಡಿದು, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೆಕ್ಕಿ ಶುಚಿಗೊಳಿಸಲಾಯಿತು.
ಸೇವೆಯಲ್ಲಿ ಸಂಯೋಜಕಿ ಬಾಳೆಯಡ ದಿವ್ಯ, ಉಮಾಲಕ್ಷ್ಮಿ, ನಿಶಾ, ಗೀತಾ, ಆಶಾ, ದಮಯಂತಿ, ದಿಲೀಶ್, ಸೀನ ಮಾಧವನ್, ಶಂಕರ್, ಶರವಣ ಉಪಸ್ಥಿತರಿದ್ದರು.
ವರದಿ : ದುಗ್ಗಳ ಸದಾನಂದ.








