ನಾಪೋಕ್ಲು ಏ.1 : ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದ ಬಳಿ ಅಮ್ಮಂಗೇರಿಯಲ್ಲಿ ಪುದಿಯೋದಿ ದೇವರ ವಾರ್ಷಿಕ ಕೋಲವು ಶ್ರದ್ಧಾಭಕ್ತಿಯಿಂದ ಜರುಗಿತು.
ಈ ದೈವವು ಪಾಡಿ ಶ್ರೀ ಇಗ್ಗುತ್ತಪ್ಪ ದೇವರ ಕಾವಲುಗಾರ ಆಗಿ ನೆಲೆ ನಿಂತು ನಂಬಿದವರಿಗೆ ಒಳಿತು ಮಾಡುವ ದೇವರೆಂದು ಪ್ರಸಿದ್ಧಿ ಪಡೆದಿದೆ. ಮಾ.30 ರ ರಾತ್ರಿಯಿಂದ ದೈವಸ್ಥಾನದಲ್ಲಿ ದೈವತಾ ಕಾರ್ಯಗಲು ಜರುಗಿ ನಂತರ ಮುಂಜಾನೆಯ ವರೆಗೆ ಬೀರ, ಬೀರಾಳಿ ಸೇರಿದಂತೆ ವಿವಿಧ ದೈವಗಳ ಕೋಲ ನಡೆಯಿತು.
ಮಾ.31 ರಂದು ಮುಂಜಾನೆ ಪುದಿಯೋಧಿ, ಭದ್ರಕಾಳಿ ದೇವರ ಕೋಲವು ನಡೆದು ಭಕ್ತಾದಿಗಳು ಇಷ್ಟಾರ್ಥ ಸೇವೆ ಹರಕೆ ಒಪ್ಪಿಸಿ ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭ ಗ್ರಾಮಸ್ಥರು, ಪರ ಊರಿನ ಭಕ್ತಾದಿಗಳು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಕೋಲವನ್ನು ಕಟ್ಟಿದವರು ತಮ್ಮ ಮೈ ಪಕ್ಕದಲ್ಲಿ ಉರಿಯುವ ಬೆಂಕಿಯ ಜ್ವಾಲೆಯನ್ನು ಕಟ್ಟಿ ಕೊಂಡು ಮೈ ಸುಡುವ ಹಾಗೆ ದೇವರು ಬರುವ ದೃಶ್ಯ ನೋಡುಗರನ್ನು ಮೂಕಪ್ರೇಕಕರನ್ನಾಗಿಸಿತು.
ವರದಿ : ದುಗ್ಗಳ ಸದಾನಂದ.








