ಕುಶಾಲನಗರ, ಏ.1: ಕುಶಾಲನಗರ ಟೈಕೂನ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಏ.3 ರಿಂದ 15 ದಿನಗಳ ಕಾಲ ಹಾಕಿ, ಅಥ್ಲೆಟಿಕ್ಸ್ ಬೇಸಿಗೆ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಕ್ಲಬ್ ಅಧ್ಯಕ್ಷ ಹೆಚ್.ಈ ರಮೇಶ್ ತಿಳಿಸಿದ್ದಾರೆ.
ಕುಶಾಲನಗರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಬೆಳಗ್ಗೆ 6 ರಿಂದ 8 ಗಂಟೆ ತನಕ ಹಾಕಿ ಮತ್ತು ಅಥ್ಲೆಟಿಕ್ಸ್ ಬಗ್ಗೆ ತರಬೇತಿ ನೀಡಲಾಗುವುದು ರಾಷ್ಟ್ರೀಯ ಮಟ್ಟದ ಹಾಕಿ ತರಬೇತುದಾರರಾದ ಬಿ.ವಿ. ಕಿಶನ್, ಜಿ.ಎಸ್ ಚಂದ್ರಶೇಖರ್, ಕೆ ಟಿ ಸೌಮ್ಯ ಅಥ್ಲೆಟಿಕ್ಸ್ ತರಬೇತುದರಾದ ಬಿ.ಜಿ.ಮಂಜುನಾಥ ಸೇರಿದಂತೆ ಕ್ರೀಡಾಶಾಲೆಯ ತರಬೇತಿದಾರರು ಶಿಬಿರಾರ್ಥಿಗಳಿಗೆ ತರಬೇತಿ ನೀಡಲಿದ್ದಾರೆ.
ಶಿಬಿರಾರ್ಥಿಗಳಿಗೆ ಈಜು ತರಬೇತಿ ಗುಡ್ಡೆ ಹೊಸೂರು ಬಳಿಯ ಈಡನ್ ಗಾರ್ಡನ್ ಈಜುಕೊಳದಲ್ಲಿ ಬೆಳಗ್ಗೆ 9 ರಿಂದ ಒಂದು ಗಂಟೆ ಕಾಲ ನಡೆಯಲಿದೆ. ತರಬೇತಿದಾರರಾದ ಬಿ.ಟಿ ಪೂರ್ಣೇಶ್, ಶ್ರೇಯಸ್ ಶೆಟ್ಟಿ ಸಾತ್ವಿಕ್ ಶೆಟ್ಟಿ ಹಾಗೂ ಮೈಸೂರಿನ ಚಂದ್ರಶೇಖರ ರೆಡ್ಡಿ ಅವರುಗಳು ತರಬೇತು ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಮಾತನಾಡಿದ ಕ್ಲಬ್ ಕಾರ್ಯದರ್ಶಿ ಬಿ.ಟಿ.ಪೂರ್ಣೇಶ್, ಹಾಕಿ ಮತ್ತು ಅಥ್ಲೆಟಿಕ್ಸ್ ತರಬೇತಿಯನ್ನು ಕುಶಾಲನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನೀಡಲಾಗುವುದು. 50ಕ್ಕೂ ಅಧಿಕ ಶಿಬಿರಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ತಮ್ಮ ಕ್ಲಬ್ ಮೂಲಕ ಹಲವು ಕ್ರೀಡಾಪಟುಗಳು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ ಎಂದು ತಿಳಿಸಿದರು. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ7899360392 ಸಂಪರ್ಕಿಸುವಂತೆ ಕೋರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕ್ಲಬ್ ಸಹ ಕಾರ್ಯದರ್ಶಿ ಜಿಎಸ್ ಚಂದ್ರಶೇಖರ್,ನಿರ್ದೇಶಕರಾದ ಕಿಶನ್ ಇದ್ದರು.









