ಮಡಿಕೇರಿ ಏ.1 : ವಿಧಾನಸಭಾ ಸಾರ್ವತ್ರಿಕ ಚುನಾವಣೆ ನೀತಿ ಸಂಹಿತೆ ಜಾರಿ ಆಗಿರುವ ಹಿನ್ನೆಲೆ ರಾಜಕೀಯ ಪಕ್ಷಗಳು/ ಸ್ವತಂತ್ರ ಅಭ್ಯರ್ಥಿಗಳು ಸಾಮೂಹಿಕ ಕಾರ್ಯಕ್ರಮ ನಡೆಸುವ ಮೊದಲು ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ಉಪ ವಿಭಾಗಾಧಿಕಾರಿ ಹಾಗೂ ಮಡಿಕೇರಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಯತೀಶ್ ಉಲ್ಲಾಳ್ ಅವರು ತಿಳಿಸಿದ್ದಾರೆ.
ಮುನ್ನೆಚ್ಚರಿಕೆಯಾಗಿ ದಾಖಲಾತಿಗಳನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಅವರಿಗೆ ಸಲ್ಲಿಸಿ ಅವರಿಂದ ಪೂರ್ವಾನುಮತಿ ಪಡೆದುಕೊಳ್ಳುವಂತೆ ತಿಳಿಸಿದ್ದಾರೆ.
ಯಾವುದಕ್ಕೆ ಅನುಮತಿ: ವಿಧಾನಸಭಾ ಚುನಾವಣಾ ಸಂಬಂಧ ಮೆರವಣಿಗೆ, ರ‍್ಯಾಲಿ, ಬೀದಿಯಲ್ಲಿ ಧ್ವನಿ ವರ್ಧಕದೊಂದಿಗೆ ಚುನಾವಣೆ ಸಂಬಂಧ ಸಭೆ ನಡೆಸಲು, ತಾತ್ಕಾಲಿಕ ಕಚೇರಿ ತೆರೆಯಲು, ಚುನಾವಣಾ ಪ್ರಚಾರಕ್ಕೆ ವಾಹನಗಳನ್ನು ಬಳಸಲು, ವೀಡಿಯೋ ವ್ಯಾನ್ ವಾಹನಕ್ಕೆ ಅನುಮತಿ, ಹೆಲಿಕಾಪ್ಟರ್ ಮತ್ತು ಹೆಲಿಪ್ಯಾಡ್‍ಗೆ, ಗಾಳಿ ಬಲೂನುಗೆ ಪೂರ್ವಾನುಮತಿ ಪಡೆದುಕೊಳ್ಳಬೇಕು ಎಂದು ಯತೀಶ್ ಉಲ್ಲಾಳ್ ಅವರು ಹೇಳಿದ್ದಾರೆ.
ಅನುಮತಿ ಪತ್ರದೊಂದಿಗೆ, ಆಧಾರ್ ಕಾರ್ಡ್, ತಾತ್ಕಾಲಿಕ ಖರ್ಚು, ಸ್ಥಳದ ಮಾಲೀಕರ ಅನುಮತಿ, ಬಳಸಲಾಗುವ ವಾಹನಗಳ ವಿವರ, ಸ್ಥಳೀಯ ಪ್ರಾಧಿಕಾರ, ಪೊಲೀಸ್ ಇಲಾಖೆ, ಅಗ್ನಿ ಶಾಮಕ ಇಲಾಖೆ, ಹೆಲಿಕಾಪ್ಟರ್ ಮತ್ತು ಹೆಲಿಪ್ಯಾಡ್ ಅನುಮತಿಗಾಗಿ ಹೆಲಿಕಾಪ್ಟರ್ ಮಾಲೀಕರು/ ಕಂಪೆನಿ ಹೆಸರು, ಹೆಲಿಕಾಪ್ಟರ್ ನೋಂದಣಿ ಸಂಖ್ಯೆ, ಹೆಲಿಕಾಪ್ಟರ್‍ನ ಆಸನ ಸಾಮರ್ಥ್ಯ (ಪೈಲಟ್ ಹೊರತುಪಡಿಸಿ), ಜೊತೆಯಲ್ಲಿ ಪ್ರಯಾಣಿಸುವ ವ್ಯಕ್ತಿಗಳ ವಿವರಗಳನ್ನು ಒದಗಿಸಬೇಕು ಎಂದು ಉಪ ವಿಭಾಗಾಧಿಕಾರಿ ಮತ್ತು ಮಡಿಕೇರಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಯತೀಶ್ ಉಳ್ಳಾಲ್ ಅವರು ತಿಳಿಸಿದ್ದಾರೆ.
ನಾಗರಿಕರು ಮತ್ತು ರಾಜಕೀಯ ಪಕ್ಷಗಳು https://suvidha.eci.gov.in/ ಈ ಲಿಂಕ್ ಬಳಸಿ ಅನುಮತಿ ಪಡೆಯಬಹುದಾಗಿದೆ ಎಂದು ಉಪ ವಿಭಾಗಾಧಿಕಾರಿ ಮತ್ತು ಮಡಿಕೇರಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಯತೀಶ್ ಉಳ್ಳಾಲ್ ಅವರು ತಿಳಿಸಿದ್ದಾರೆ.