ಮಡಿಕೇರಿ ಏ.1 : ವಿಧಾನಸಭಾ ಚುನಾವಣೆಯ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮುಂಬರುವ ಭಾನುವಾರಗಳಂದು ‘ಕೊಡಗು ಮತ್ತು ಚುನಾವಣೆ’ ಎಂಬ ವಿಷಯದಡಿ ದೊಡ್ಡ ಮಟ್ಟದ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲು ಜಿಲ್ಲಾಡಳಿತ ಉದ್ದೇಶಿಸಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಡಾ. ಬಿ.ಸಿ.ಸತೀಶ ಅವರು ತಿಳಿಸಿದ್ದಾರೆ.
ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ‘ಮಾಧ್ಯಮಗಳೊಂದಿಗೆ ಸಂವಾದ’ ದಲ್ಲಿ ಪಾಲ್ಗೊಂಡು ಮಾತನಾಡಿದ ಜಿಲ್ಲಾಧಿಕಾರಿ, ಮುಂದಿನ ಏ.9 ರ ಭಾನುವಾರ ಜಿಲ್ಲೆಯ ಕಲಾವಿದರಿಂದ ಕೊಡಗಿನ ಚುನಾವಣೆಗೆ ಸಂಬಂಧಿಸಿದಂತೆ ಕಲಾಕೃತಿಗಳನ್ನು ರಚಿಸುವ ಮತ್ತು ಅದನ್ನು ಪ್ರದರ್ಶಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಚಿಂತಿಸಲಾಗಿದೆ. ಕಲಾವಿದರ ಕಲಾಕೃತಿಗಳನ್ನು ಗಮನಿಸಿ ಅವುಗಳನ್ನು ‘ಡಿಜಿಟಲೈಸ್ಟ್’ ಮಾಡುವ ಮೂಲಕ ಚುನಾವಣಾ ಜಾಗೃತಿ ಪ್ರಚಾರಕ್ಕೂ ಬಳಸಿಕೊಳ್ಳುವ ಉದ್ದೇಶವಿದೆ ಎಂದರು.
::: ಅನುಮತಿ ಅಗತ್ಯ :::
ಸಾಮಾಜಿಕ ಜಾಲತಾಣಗಳಾದ ವ್ಯಾಟ್ಸ್ ಅಪ್, ಯೂಟ್ಯೂಬ್, ಫೇಸ್, ಬುಕ್, ಟ್ವಿಟ್ಟರ್ ಸೇರಿದಂತೆ ಯಾವುದೇ ಮಾಧ್ಯಮದಲ್ಲಿ ಚುನಾವಣಾ ಘೋಷಿತ ಅಭ್ಯರ್ಥಿUಳು, ಆಕಾಂಕ್ಷಿಗಳು, ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸುವವರು ಯಾರೇ ಆಗಿರಲಿ ಚುನಾವಣಾ ಪ್ರಚಾರದ ಅಂಶಗಳನ್ನು ಒಳಗೊಂಡ ವಿಚಾರಗಳನ್ನು ಪೋಸ್ಟ್ ಮಾಡುವುದಿದ್ದಲ್ಲಿ ಅನುಮತಿ ಪಡೆಯವುದು ಕಡ್ಡಾಯವೆಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.
ಚುನಾವಣಾ ನಾಮಪತ್ರ ಸಲ್ಲಿಕೆಯ ಬಳಿಕ ಈ ರೀತಿ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಿದ ವೆಚ್ಚವೂ ಅಭ್ಯರ್ಥಿಯ ಲೆಕ್ಕಕ್ಕೆ ಒಳಪಡಲಿದೆ ಎಂದರು.
ಚುನಾವಣಾ ನೀತಿ ಸಂಹಿತೆಗೆ ಅನುಗುಣವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣೆಗೆ ಸಂಬಂಧಿಸಿದ ಯಾವುದೇ ವಿಚಾರಗಳನ್ನು ಹಾಕುವುದಿದ್ದಲ್ಲಿ ಅದಕ್ಕೆ ಅನುಮತಿಯನ್ನು ಕಡ್ಡಾಯವಾಗಿರುತ್ತದೆ. ಈ ರೀತಿ ಅನುಮತಿ ಪಡೆಯದೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ಕೆಲವರಿಗೆ ಈಗಾಗಲೆ ಕಾರಣ ಕೇಳಿ ನೋಟಿಸ್ ನೀಡಿ ಅವರ ಅಭಿಪ್ರಾಯವನ್ನು ಪಡೆಯಲಾಗಿದೆ ಎಂದು ತಿಳಿಸಿದರು.
ತಮ್ಮ ಪಕ್ಷದ ಗುರುತು, ಬಾವುಟ, ಬ್ಯಾನರ್‍ಗಳನ್ನು ಅಳವಡಿಸುವುದಿದ್ದಲ್ಲಿ ಆಯಾ ಖಾಸಗಿ ಜಾಗದ ಮಾಲೀಕರ ಒಪ್ಪಿಗೆಯೊಂದಿಗೆ ಡಿಸ್ಟ್ರಿಕ್ಟ್ ಮಿಡಿಯಾ ಸರ್ಟಿಫಿಕೇಶನ್ ಅಂಡ್ ಮಾನಿಟರಿಂಗ್ ಕಮಿಟಿಯಿಂದ ಅನುಮತಿ ಪಡೆಯುವುದು ಅತ್ಯವಶ್ಯವೆಂದರು.
::: ಅನ್ನದಾನಕ್ಕೆ ಅವಕಾಶವಿಲ್ಲ :::
ವಿವಾಹ ಸಮಾರಂಭ ಮೊದಲಾದ ಖಾಸಗಿ ಕಾರ್ಯಕಗಳ ಆಯೋಜನೆಗೆ ಯಾವುದೇ ನಿರ್ಬಂಧಗಳಿಲ್ಲ. ಸಾರ್ವಜನಿಕವಾಗಿ ಆಚರಿಸುವ ದೇವರ ಉತ್ಸವಗಳಲ್ಲಿ ನಡೆಸುವ ಮೆರವಣಿಗೆ ಮೊದಲಾದವುಗಳಿಗೆ ಅನುಮತಿಯನ್ನು ಪಡೆದುಕೊಳ್ಳಬೇಕು. ಪ್ರಸಾದ ವಿತರಣೆ ಬಿಟ್ಟರೆ ಯಾವುದೇ ಕಾರಣಕ್ಕು ಅನ್ನದಾನಕ್ಕೆ ಅವಕಾಶ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.
::: ಕಟ್ಟು ನಿಟ್ಟಿನ ತಪಾಸಣೆ :::
ಜಿಲ್ಲೆಯ ಅಂತರರಾಜ್ಯ ಮತ್ತು ಅಂತರ ಜಿಲ್ಲಾ ಗಡಿಗಳಲ್ಲಿ ಕಟ್ಟುನಿಟ್ಟಿನ ತಪಾಸಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪೆರುಂಬಾಡಿಯಲ್ಲಿದ್ದ ಚೆಕ್ ಪೋಸ್ಟ್‍ನ್ನು ಮಾಕುಟ್ಟಕ್ಕೆ ಸ್ಥಳಾಂತರಿಸಲಾಗಿದೆ. ಚೆಕ್ ಪೋಸ್ಟ್ ಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು.
::: ಮಾಧ್ಯಮಗಳಿಗೆ ನಿರ್ಬಂಧವಿಲ್ಲ :::
ಮುದ್ರಣ ಮತ್ತು ದೃಶ್ಯ ವಾಹಿನಿಗಳಲ್ಲಿ ಚುನಾವಣೆ ಸಂಬಂಧವಾದ ಸುದ್ದಿಗಳನ್ನು ಪ್ರಕಟಿಸುವುದಕ್ಕೆ ಯಾವುದೇ ನಿರ್ಬಂಧವಿಲ್ಲ. ಅಭ್ಯರ್ಥಿಗಳ ಸಂದರ್ಶನವನ್ನು ಪ್ರಕಟಿಸುವ ಅಥವಾ ದೃಶ್ಯ ವಾಹಿನಿಗಳಲ್ಲಿ ಬಿತ್ತರ ಮಾಡುವ ಸಂದರ್ಭ ಎಲ್ಲಾ ಪಕ್ಷಗಳಿಗೂ ಸಮಾನ ಅವಕಾಶವನ್ನು ನೀಡುವುದು ಅವಶ್ಯವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.
::: ಬಂದೂಕುಗಳ ಠೇವಣಿ :::
ಚುನಾವಣಾ ಅವಧಿಯಲ್ಲಿ ಬಂದೂಕು ಪರವಾನಗಿ ಹೊಂದಿರುವವರು ಸಮೀಪದ ಠಾಣೆಗಳಲ್ಲಿ ಬಂದೂಕುಗಳನ್ನು ಠೇವಣಿ ಇರಿಸಬೇಕಾಗುತ್ತದೆ ಎಂದು ತಿಳಿಸಿದರು.
::: ‘ಸಖಿ ಬೂತ್’ :::
ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಎಸ್.ಆಕಾಶ್ ಮಾತನಾಡಿ, ಮಹಿಳಾ ಮತದಾರರಿಗೆ ಮತದಾನದ ಕುರಿತು ಪ್ರೇರಣೆ ನೀಡಲು ಚುನಾವಣಾ ಸಂದರ್ಭ ಮಹಿಳೆಯರೇ ನಿರ್ವಹಿಸುವ ‘ಸಖಿ ಬೂತ್’ಗಳನ್ನು ತೆರೆಯಲಾಗುತ್ತದೆ ಎಂದರು.
ಸಂವಾದದಲ್ಲಿ ಎಡಿಸಿ ಡಾ.ನಂಜುಂಡೇಗೌಡ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್, ಜಿಲ್ಲಾ ವಾರ್ತಾಧಿಕಾರಿ ಚಿನ್ನಸ್ವಾಮಿ, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಪತ್ರಕರ್ತರು ಉಪಸ್ಥಿತರಿದ್ದರು.
Breaking News
- *ಪ್ರತೀ ಜಿಲ್ಲೆಯಲ್ಲೂ 200 ಆಸನಗಳ ಮಿನಿ ಚಿತ್ರಮಂದಿರ ಸ್ಥಾಪನೆ : ಸಿ.ಎಂ ಘೋಷಣೆ*
- *ಖೋ ಖೋ ವಿಶ್ವಕಪ್ : ರಾಜ್ಯದ ಇಬ್ಬರು ಆಟಗಾರರಿಗೆ ತಲಾ 5 ಲಕ್ಷ ರೂ. ಘೋಷಿಸಿದ ಸಿಎಂ*
- *ರಾಜಾಸೀಟು ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನದ ಆಕರ್ಷಣೆ*
- *ರೈಲ್ವೆ ಇಲಾಖೆಯ 32,438 ಗ್ರೂಪ್-ಡಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ*
- *ಭಾಗಮಂಡಲ ಗ್ರಾ.ಪಂ ವತಿಯಿಂದ ಅಂಗನವಾಡಿಗಳಿಗೆ ಕೊಡುಗೆ*
- *ಗಣರಾಜ್ಯೋತ್ಸವದಂದು ಸಿಎನ್ಸಿಯಿಂದ ಶಾಂತಿಯುತ ಹಕ್ಕೊತ್ತಾಯ ಮಂಡನೆ*
- *ಪ್ರಾಣಿ ದಯಾಸಂಘದ ವಾರ್ಷಿಕ ಮಹಾಸಭೆ : ಹಲವು ವಿಚಾರ ಕುರಿತು ಚರ್ಚೆ*
- *ರಾಜಾಸೀಟು ಉದ್ಯಾನದಲ್ಲಿ ಕಣ್ಮನ ಸೆಳೆಯುತ್ತಿರುವ ಫಲಪುಷ್ಪ ಪ್ರದರ್ಶನ : ಶಾಸಕ ಡಾ.ಮಂತರ್ ಗೌಡ ಉದ್ಘಾಟನೆ*
- *ರಾಜಾಸೀಟು ಫಲಪುಷ್ಪ ಪ್ರದರ್ಶನದಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ಓಂಕಾರೇಶ್ವರ ದೇವಾಲಯದ ಆಕರ್ಷಣೆ*
- *ಮಡಿಕೇರಿಯಲ್ಲಿ ಹಿರಿಯ ನಾಗರಿಕರಿಗೆ ಕಣ್ಣಿನ ತಪಾಸಣಾ ಶಿಬಿರ*