ಮಡಿಕೇರಿ ಏ.4 : ‘ಕುಲಶಾಸ್ತ್ರ ಅಧ್ಯಯನ’ದ ವಿಚಾರದಲ್ಲಿ ಕೊಡವ ಭಾಷೆಯನ್ನಾಡುವ ಸಮುದಾಯಗಳನ್ನು ತಾರತಮ್ಯದಿಂದ ಕಾಣುವ ಪ್ರಯತ್ನಗಳನ್ನು ಸೇವ್ ಕೊಡಗು ವೇದಿಕೆ ತೀವ್ರವಾಗಿ ವಿರೋಧಿಸುತ್ತದೆ. ಇದು ಕೊಡವ ಮನಸ್ಸುಗಳನ್ನು ಭಾವನಾತ್ಮಕವಾಗಿ ಪ್ರಚೋದಿಸಿ ಇತರ ಜನಾಂಗಗಳ ವಿರುದ್ಧ ಎತ್ತಿಕಟ್ಟುವ ಪ್ರಯತ್ನವೆಂದು ವೇದಿಕೆಯ ಪದಾಧಿಕಾರಿ ಕೆ.ಬಿ.ಬೋಪಣ್ಣ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಲಶಾಸ್ತ್ರ ಅಧ್ಯಯನದ ವಿಚಾರದಲ್ಲಿ ಸ್ವಯಂಘೋಷಿತ ನಾಯಕರೊಬ್ಬರು ಕೊಡವ ಭಾಷೆಯನ್ನಾಡುವ ಜನಾಂಗಗಳನ್ನು ಪ್ರಾಣಿಗಳಿಗೆ ಹೋಲಿಕೆ ಮಾಡಿ ಹೇಳಿಕೆ ನೀಡಿರುವುದು ಜನಾಂಗೀಯ ತಾರತಮ್ಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಾತು ಮಾತಿಗೂ ಸಮಾನತೆ, ಸಹೋದರತ್ವ ಮತ್ತು ಪ್ರಜಾಸತ್ತಾತ್ಮಕತೆಯ ಬುನಾದಿಯ ಮೇಲೆ ರಚಿತವಾಗಿರುವ ಭಾರತದ ಸಂವಿಧಾನ ಹಾಗೂ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಸರನ್ನು ಹೇಳುವ ಈ ವ್ಯಕ್ತಿ ಒಂದು ಜನಾಂಗವನ್ನು ಶ್ರೇಷ್ಠವೆಂದು, ಇತರ ಕೊಡವ ಭಾಷಿಕ ಜನಾಂಗಗಳು ಕೀಳೆಂದು ಹೇಳ ಹೊರಟಿರುವುದು ವಿಪರ್ಯಾಸ. ಇದರಲ್ಲಿ ಇತರ ಜನಾಂಗದವರನ್ನು ಕೊಡವ ಸಂಸ್ಕೃತಿಯ ಪರಿಧಿಯಿಂದ ಹೊರದಬ್ಬಿ ಅವರಿಗೆ ತ್ರಿಶಂಕು ಸ್ವರ್ಗ ಸೃಷ್ಟಿಸುವ ಹುನ್ನಾರವಿದೆ ಎಂದು ಆರೋಪಿಸಿದರು.
ಕಳೆದ ಎರಡು- ಮೂರು ದಶಕಗಳಿಂದ ವಿವಿಧ ಅಜೆಂಡಾಗಳನ್ನು ಮುಗ್ಧ ಜನರ ಮೇಲೆ ಹೇರುವ ಪ್ರಯತ್ನಗಳನ್ನು ನಡೆಸುತ್ತಾ, ಅದರಲ್ಲಿ ಸಫಲತೆ ಕಾಣದೆ ಭ್ರಮನಿರಸನಗೊಂಡು ಕೊಡವ ಭಾಷಿಕ ಸಮುದಾಯಗಳ ಬಗ್ಗೆ ಹೇಳಿಕೆ ನೀಡಿರುವುದು ಅವರ ಸೋಲಿನ ಪರಾಕಾಷ್ಠೆಯೇ ಆಗಿದೆ ಎಂದು ಲೇವಡಿ ಮಾಡಿದರು.
ಕೊಡವ ಭಾಷಿಕ ಸಮುದಾಯಗಳ ವಿರುದ್ಧದ ಹೇಳಿಕೆಗಳ ಬಗ್ಗೆ ಅಖಿಲ ಕೊಡವ ಸಮಾಜ ಹೊರತು ಪಡಿಸಿದಂತೆ ಸಮುದಾಯದ ಇತರ ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸದಿರುವುದು ದುರಾದೃಷ್ಟಕರ ಎಂದರು.
::: ಇತಿಹಾಸಕ್ಕೆ ಅಪಚಾರ :::
ಇದೇ ರೀತಿ ಕೊಡವ ನಾಟಕಕಾರರೊಬ್ಬರು ನೀಡಿರುವ ಹೇಳಿಕೆ ಕೊಡವ ಸಮುದಾಯವನ್ನು ಮುಜುಗರಕ್ಕೀಡುಮಾಡಿದೆ. ಇತಿಹಾಸದ ಪರಿಜ್ಞಾನವಿಲ್ಲದೆ ನೀಡುವ ಇಂತಹ ಹೇಳಿಕೆಗಳು ಇತಿಹಾಸಕ್ಕೆ ಅಪಚಾರವೆಸಗಿದಂತೆ ಎಂದು ಕೆ.ಬಿ.ಬೋಪಣ್ಣ ಹೇಳಿದರು.
::: ಪಕ್ಷಾತೀತ ಆಯ್ಕೆ :::
ವಿಧಾನಸಭಾ ಚುನಾವಣೆಯಲ್ಲಿ ಕೊಡಗಿನಲ್ಲಿ ವಿವಿಧ ಸಮುದಾಯಗಳ ಸಾಮರಸ್ಯಕ್ಕೆ ಒತ್ತು ನೀಡುವ ಮತ್ತು ಕೊಡಗಿನ ಅಭಿವೃದ್ಧಿಯಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವ ಅಭ್ಯರ್ಥಿಯನ್ನು ಪಕ್ಷಾತೀತವಾಗಿ ಆಯ್ಕೆ ಮಾಡಿದರೆ ಉತ್ತಮ ಆಡಳಿತವನ್ನು ನಿರೀಕ್ಷಿಸಲು ಸಾಧ್ಯವಾಗುತ್ತದೆ. ಕೊಡಗಿನ ಮತದಾರರು ಈ ಬಗ್ಗೆ ಚಿಂತಿಸಿ ತಮ್ಮ ಮೌಲ್ಯಯುತ ಮತವನ್ನು ಅರ್ಹರಿಗೆ ನೀಡುವಂತೆ ಬೋಪಣ್ಣ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಪದಾಧಿಕಾರಿಗಳಾದ ಬಿ.ಟಿ.ದಿನೇಶ್ ಹಾಗೂ ಜಿನ್ನು ನಾಣಯ್ಯ ಉಪಸ್ಥಿತರಿದ್ದರು.
Breaking News
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*
- *ಕೊಡಗು ಕೃಷಿ ವಿಜ್ಞಾನ ವೇದಿಕೆಯ ಬೆಳ್ಳಿ ಮಹೋತ್ಸವ : ನ.26 ರಂದು ರೈತ ಮೇಳ*
- *ಡಿ.1 ರಂದು ಗಾಳಿಬೀಡುವಿನಲ್ಲಿ ಬಾಣೆ ಹಬ್ಬ*
- *ನ.26 ರಂದು ಮಡಿಕೇರಿಯಲ್ಲಿ ಜಿಕೀರ್, ಜಾರಿ ಮತ್ತು ನಾತೆ-ರಸುಲ್” ಗಾಯನ*
- *ವಿಶ್ವಾಸ್ ವೆಂಕಟ್ ಗೆ ಟೇಬಲ್ ಟೆನ್ನಿಸ್ ನಲ್ಲಿ ರನ್ನರ್ ಪ್ರಶಸ್ತಿ*