ಮಡಿಕೇರಿ ಏ.4 : ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಕುಟುಂಬಗಳ ನಡುವೆ ಕುದ್ಕುಳಿ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಲಾಗಿದೆ. ಭಾಗಮಂಡಲದಲ್ಲಿ ಮಕ್ಕಳ ತಜ್ಞ ಮೇ. ಡಾ.ಕುಶ್ವಂತ್ ಕೋಳಿಬೈಲು ಅವರು ಪಂದ್ಯಾವಳಿಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ಪ್ರತಿವರ್ಷ ಕೌಟುಂಬಿಕ ಕ್ರೀಡಾ ಕೂಟದಲ್ಲಿ ಆಟಗಾರನಾಗಿ ನಾನು ಭಾಗಹಿಸುತ್ತಿದ್ದೆ. ಇದರಿಂದ ನಮ್ಮ ಕುಟುಂಬದ ಜನರ ಮತ್ತು ಇತರ ಕುಟುಂಬದವರ ಪರಿಚಯ ಹಾಗೂ ಒಡನಾಟ ಹೆಚ್ಚಾಗುತ್ತದೆ. ಕ್ರೀಡೆಯಿಂದ ಆರೋಗ್ಯ ಮತ್ತು ಸೌಹಾರ್ದತೆ ಬೆಳೆಯುತ್ತದೆ ಎಂದು ಅಭಿಪ್ರಾಯಪಟ್ಟರು.
ಕುದ್ಕುಳಿ ಕುಟುಂಬದ ಪ್ರಮುಖರು, ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷ ಅಂಬೆಕಲ್ಲು ನವೀನ್ ಕುಶಾಲಪ್ಪ, ವಿವಿಧ ಕುಟುಂಬಗಳ ಆಟಗಾರರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.












