ಸಿದ್ದಾಪುರ ಏ.6 : ವಲಯ ಕಾಂಗ್ರೆಸ್ ಸಮಿತಿ ಸಲಹೆಯಂತೆ ನೆಲ್ಯಹುದಿಕೇರಿ ವಲಯ ಕಾಂಗ್ರೆಸ್ ಸಮಿತಿಗೆ ಹೆಚ್ಚುವರಿಯಾಗಿ ಕಾಂಗ್ರೆಸ್ ಕಾರ್ಯಕರ್ತ ಹಾಗೂ ಗ್ರಾ.ಪಂ ಸದಸ್ಯ
ಈ. ಎಚ್ ಹನೀಫ ಅವರನ್ನ ಕಾರ್ಯಾಧ್ಯಕ್ಷರಾಗಿ ನೇಮಕ ಮಾಡಲಾಗಿದ್ದು, ವಲಯ ಕಾಂಗ್ರೆಸ್ ಅಧ್ಯಕ್ಷರಾಗಿ ಸಾಬು ವರ್ಗೀಸ್ ಮುಂದುವರೆಯಲಿದ್ದಾರೆ ಎಂದು ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ ಶಶಿಧರ್ ತಿಳಿಸಿದ್ದಾರೆ.











