ಮಡಿಕೇರಿ ಏ.6 : ಮೂರ್ನಾಡು ಸಮೀಪದ ಕಿಗ್ಗಾಲು ಗ್ರಾಮದ ಶ್ರೀ ಚಾಮುಂಡೇಶ್ವರಿ ದೇವರ ವಾರ್ಷಿಕೋತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು.
ದೇವರಿಗೆ ಕೋಟ್ಟಿ ಹಾಡುವುದು, ದೇವ ತಕ್ಕರ ಮನೆಯಿಂದ ಭಂಡಾರವನ್ನು ಬನಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ತೆಂಗಿನಕಾಯಿಗೆ ಗುಂಡು ಹೊಡೆದು ಕಟ್ಟು ಸಡಿಲಿಸಿ ನಂತರ ದೈವ ಸನ್ನಿಧಿಯಲ್ಲಿ ಕುಟ್ಟಿಚಾತ ತೆರೆ ಹಾಗೂ ಪ್ರಸಾದ ವಿನಿಯೋಗ ನಡೆಯಿತು.
ನಂತರ ಭಂಡಾರವನ್ನು ಅಂಬಲಕ್ಕೆ ತಂದು ರಾತ್ರಿ ಮೆಲೇರಿಗೆ ಅಗ್ನಿ ಸ್ಪರ್ಶ ನಡೆದ ನಂತರ ಬೆಳಗ್ಗಿನವರೆಗೆ ಹಲವು ದೈವಗಳ ತೆರೆ ನಡೆಯಿತು.
ಮುಂಜಾನೆ ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿ ಪ್ರವೇಶ ನಡೆಯಿತು. ನಂತರ ಶ್ರೀ ಚಾಮುಂಡೇಶ್ವರಿ ದೈವದ ದೊಡ್ಡಮುಡಿ ತೆರೆಯೊಂದಿಗೆ ಉತ್ಸವವು ಸಂಪನ್ನಗೋಂಡಿತು.











