ವಿರಾಜಪೇಟೆ: ಏ.6 : ರಾಮಭಕ್ತ ಹನುಮನ ಜಯಂತಿಯನ್ನು ವಿರಾಜಪೇಟೆ ಪಟ್ಟಣದ ಶ್ರೀವೀರಾಂಜನೇಯ ದೇವಾಲಯ ಹಾಗೂ ಚಿಕ್ಕಪೇಟೆಯ ಚತ್ರಕೆರೆಯ ಶ್ರೀಗಣಪತಿ ಆಂಜನೇಯ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಭಕ್ತರಿಂದ ಶ್ರೀರಾಮ ಭಜನೆ, ಹನುಮನ ಸಂಕೀರ್ತನೆಗಳು ನಡೆಯಿತು. ವಿಶೇಷ ಅಭಿಷೇಕ, ಪಂಚಾಮೃತ ಅಭಿಷೇಕ ಹಾಗೂ ವಿಶೇಷ ಅಲಂಕಾರ ಪೂಜೆ ನಡೆಯಿತು.
ಮಹಾಪೂಜೆಯ ನಂತರ ಭಕ್ತರಿಗೆ ಪ್ರಸಾದ ವಿನಿಯೋಗ ನಡೆಯಿತು. ದೇವಾಲಯದ ಆಡಳಿತ ಮಂಡಳಿಯ ಪದಾಧಿಕಾರಿಗಳು, ಅರ್ಚಕರು ಸೇರಿದಂತೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.











